ಒಂದೇಡೆ ಭಾರತ್ ಜೋಡೋ ಯಾತ್ರೆ…. ಇನ್ನೊಂದೆಡೆ ಗೋವಾ ಕಾಂಗ್ರೆಸ್’ನ 8 ಶಾಸಕರು ಬಿಜೆಪಿ ತೆಕ್ಕೆಗೆ…!
ಪಣಜಿ ಸೆ.14: ಗೋವಾದಲ್ಲಿ ಎಂಟು ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಡೆ ಹೇಳಿದ್ದಾರೆ.
ಅಲ್ಲಿನ 11 ಶಾಸಕರಲ್ಲಿ ಎಂಟು ಮಂದಿ ಹಿರಿಯ ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ನೇತೃತ್ವದಲ್ಲಿ ಇಂದು ಆಡಳಿತಾರೂಢ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ಈಗಾಗಲೇ ಅವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ವಿಧಾನಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇತ್ತ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ’ಯ ಮೂಲಕ ಪಕ್ಷ ಬಲಗೊಳ್ಳುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕಾಂಗ್ರೆಸ್ ಗೆ ಆಘಾತವಾಗಿದೆ.