ಪುಣೆ: ರಸ್ತೆ ಅಪಘಾತ ಮಂಗಳೂರು ಮೂಲದ ಯುವ ದಂತ ವೈದ್ಯೆ ಮೃತ್ಯು
ಮಂಗಳೂರು, ಸೆ.14: ಪುಣೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ದಂತ ವೈದ್ಯೆ ಯೊಬ್ಬರು ಮೃತಪಟ್ಟಿದ್ದಾರೆ.
ಮಂಗಳೂರಿನ ವೆಲೆನ್ಸಿಯ ನಿವಾಸಿ ಡಾ.ಜಿಶಾ ಜೋನ್ (27) ಮೃತಪಟ್ಟವರು.
ಡಾ.ಜಿ.ಶಾ ಜೋನ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರಾದ ವೈದ್ಯೆಯ ಮೃತದೇಹವನ್ನು ಪುಣೆಯಿಂದ ಮಂಗಳೂರಿಗೆ ತರಲಾಗಿದೆ ಎಂದು ಕುಟುಂಬಸ್ಥರು ತಿಳಿಸಿರೋದಾಗಿ ತಿಳಿದು ಬಂದಿದೆ.