ಉಚ್ಚಿಲ ರಸ್ತೆ ಪಕ್ಕಾ ನಿಂತಿದ್ದಾಗ ವಾಹನ ಡಿಕ್ಕಿ- ತಂದೆ ಸಾವು, ಮಗನಿಗೆ ಗಂಭೀರ
ಪಡುಬಿದ್ರೆ: ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟು ಮಗ ತೀವ್ರ ಗಾಯಗೊಂಡು ಘಟನೆ ನಡೆದಿದೆ.
ಮೃತ ದುರ್ದೈವಿ ಬೆಳಗಾವಿ ಮೂಲದ ಪ್ರಭಾಕರ್ ಕೋತ ಎಂದು ಗುರುತಿಸಲಾಗಿದ್ದು,ಗಾಯಗೊಂಡ ಬಾಲಕ ಸಮರ್ಥ್ (14) ಎಂದು ತಿಳಿದುಬಂದಿದೆ.
ಮೃತ ಪ್ರಭಾಕರ್ ಹಾಗು ಅವರ ಮಗ ಸಮರ್ಥ್ ಬೆಳಗಾವಿಯಿಂದ ಮಂಗಳವಾರ ರಾತ್ರಿ ಬಸ್ಸು ಮೂಲಕ ಹೊರಟು ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ಮಗನನ್ನು ದಾಖಲಾತಿ ಮಾಡಲು ಆಗಮಿಸಿದ್ದರು.
ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಭಾಕರ್ ಮೃತಪಟ್ಟು, ಸಮರ್ಥ್ ಗಂಭೀರ ಗಾಯಗೊಂಡಿದ್ದಾರೆ
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತಿದ್ದಾರೆ.