ಉಡುಪಿ: ಅ.2 ದುರ್ಗಾ ದೌಡ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಕಡಿಯಾಳಿಯಲ್ಲಿ ಅ.2 ರಂದು ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಾರ್ಯಕ್ರಮದ ಕಾರ್ಯಾಲಯದಲ್ಲಿ ಇಂದು ಬಿಡುಗಡೆ ಗೊಳಿಸಲಾಯಿತು.
ಕೊಡವೂರು ಶ್ರೀಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸಾಧು ಸಾಲಿಯಾನ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಉಡುಪಿಯ ಉದ್ಯಮಿಗಳಾದ ಭೀಮರಾವ್ ಚೌಧರಿ, ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಮಿತಿ ಸದಸ್ಯರಾದ ರವಿರಾಜ್ ಕಡಬ, ಹಿಂ.ಜಾ.ವೇ ಜಿಲ್ಲಾ ಸಮಿತಿ ಸದಸ್ಯರಾದ ಪ್ರಶಾಂತ್ ನಾಯಕ್ ಕಾರ್ಕಳ, ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ಉಮೇಶ್ ನಾಯಕ್ ಸೂಡಾ, ಶಂಕರ್ ಕೋಟ, ರಿಕೇಶ್ ಕಡೆಕಾರ್,ರವೀಂದ್ರ ಹೇರೂರು, ಚಂದ್ರ ಶಿರಿಯಾರ, ಕ್ಷಮ ಹೆಬ್ರಿ, ದೀಪಾ ಮೂಡುಬೆಳ್ಳೆ, ಅಶ್ವಿನಿ ಗುಂಡಿಬೈಲು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.