ಅನುಮಾನಾಸ್ಪದ ಬೀಜ ಪೊಟ್ಟಣಗಳ ಬಗ್ಗೆ ಎಚ್ಚರಿಕೆ: ಕೃಷಿ ಇಲಾಖೆ

ಮಂಗಳೂರು ಆಗಸ್ಟ್ 28:- ಅನುಮಾನಸ್ಪದವಾಗಿ ಬೀಜಗಳ ಪೊಟ್ಟಣಗಳು ಅಜ್ಞಾತ ಮೂಲಗಳಿಂದ ಸಾಗಾಣಿಕೆಯಾಗಿರುವ ಬಗ್ಗೆ ಮಾಹಿತಿ ಬಂದಿರುತ್ತದೆ. ಈ ಬೀಜಗಳು ಹೊರಗಿನ ಆಕ್ರಮಣಕಾರಿ ಜಾತಿಗಳಾಗಿರಬಹುದು ಅಥವಾ ರೋಗಕಾರಕಗಳಾಗಿರಬಹುದು.

ಇದು ಕೃಷಿ ಪರಿಸರ ವ್ಯವಸ್ಥೆಗೆ, ಜೀವ ವೈವಿಧ್ಯತೆಗೆ ಹಾಗೂ ರಾಷ್ಟ್ರ ಭದ್ರತೆಗೆ ಗಂಭೀರ ಅಪಾಯವಾಗಬಹುದು. ಆದುದರಿಂದ ರೈತ ಬಾಂಧವರು, ಅಪೇಕ್ಷಿಸದ, ಅನುಮಾನಸ್ಪದ ಬೀಜಗಳ ಪೊಟ್ಟಣಗಳನ್ನು ಖರೀದಿಸುವುದು ಹಾಗೂ ಇಂತಹ ಪ್ರಕರಣಕಂಡು ಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ದ.ಕ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!