ಅಮಿತ್ ಶಾ ಮಫ್ಲರ್ ಬೆಲೆ ರೂ 80ಸಾವಿರ- ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಫ್ಲರ್ ಬೆಲೆ 80,000 ರೂಪಾಯಿ ಮತ್ತು ಕೇಸರಿ ಪಕ್ಷದ ನಾಯಕರು 2.5 ಲಕ್ಷ ರೂಪಾಯಿ ಮೌಲ್ಯದ ಸನ್ ಗ್ಲಾಸ್ ಧರಿಸುತ್ತಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟಿ-ಶರ್ಟ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ’ಗೆ ಜನರಿಂದ “ಅಸಾಧಾರಣ ಪ್ರತಿಕ್ರಿಯೆ” ಸಿಗುತ್ತಿರುವುದರಿಂದ ಬಿಜೆಪಿ ಆತಂಕಕ್ಕೆ ಒಳಗಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅವರು ರಾಹುಲ್ ಗಾಂಧಿಯವರ ಟಿ-ಶರ್ಟ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ವತಃ ಬಿಜೆಪಿ ನಾಯಕರು 2.5 ಲಕ್ಷ ರೂ. ಸನ್ ಗ್ಲಾಸ್ ಮತ್ತು 80,000 ರೂ. ಮಫ್ಲರ್ ಧರಿಸುತ್ತಾರೆ. ಕೇಂದ್ರ ಗೃಹ ಸಚಿವರು ಧರಿಸುವ ಮಫ್ಲರ್ ಬೆಲೆ 80,000 ರೂ. ಗೆಹ್ಲೋಟ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಬಿಜೆಪಿಯವರು ಟಿ-ಶರ್ಟ್ನಲ್ಲಿ ರಾಜಕೀಯ ಮಾಡುತ್ತಿದ್ದಾರೆ” ಎಂದು ರಾಜಸ್ಥಾನ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಕಳೆದ ವಾರ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 41,000 ರೂ.ಗಿಂತ ಹೆಚ್ಚು ಬೆಲೆಯ ಟಿ- ಶರ್ಟ್ ಧರಿಸಿದ್ದರು ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.