ಹಿರಿಯಡ್ಕ: ಸರಕಾರದ ದುರಾಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಉಡುಪಿ ಸೆ.12(ಉಡುಪಿ ಟೈಮ್ಸ್ ವರದಿ): ಕೇಂದ್ರ ಹಾಗೂ ರಾಜ್ಯ ಸರಕಾರದ ಆಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರ , ಪ್ರತಿಯೊಂದರಲ್ಲೂ ಪರ್ಸಂಟೇಜ್ ವ್ಯವಹಾರವನ್ನು ಖಂಡಿಸಿ ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗ್ರಾಮೀಣ ಸಮಿತಿ ಕೋಡಿಬೆಟ್ಟು ಇದರ ವತಿಯಿಂದ ಓಂತಿಬೆಟ್ಟು ಬಸ್ ಸ್ಟಾಂಡ್ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಜಿಲ್ಲೆಗೆ ಅವಶ್ಯಕವಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ರೂಪಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ಬಿಜೆಪಿ ಯಾವುದಕ್ಕೋಸ್ಕರ ಜನೋತ್ಸವ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಹಾಗೂ ಮಳೆಯಿಂದ ಪ್ರವಾಹ ಬಂದಾಗ ನೀರಿನಲ್ಲಿ ಜನರು ಮುಳುಗಿದ್ದರೆ ಅಲ್ಲಿನ ಜನೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಡ್ಯಾನ್ಸ್ ಮಾಡುತ್ತಾರೆ. ಇತ್ತೀಚೆಗೆ ದೊಡ್ಡ ಬಳ್ಳಾಪುರದಲ್ಲಿ ಕಾಂಗ್ರೆಸ್ ನಿಂದ ಗೆದ್ದ ಶಾಸಕರನ್ನು ಸಂತೆಯಲ್ಲಿ ಜಾನುವಾರು ಖರೀದಿ ಮಾಡಿದ ರೀತಿಯಲ್ಲಿ ಖರೀದಿ ಮಾಡಿದ್ದಾರೆ. 17 ಜನ ಶಾಸಕರು ಯಾಕೆ ಬಿಜೆಪಿ ಹೋಗಿದ್ದಾರೆ. ಬಿಜೆಪಿಯನ್ನು ಉದ್ದಾರ ಮಾಡಬೇಕು ಎಂದು ಹೋಗಿದ್ದಾರಾ ಎಂದು ಪ್ರಶ್ನಿಸಿದ ಅವರು, ಈ ಶಾಸಕರುಗಳು ದುಡ್ಡು ಮಾಡಬೇಕು ಅಧಿಕಾರ ಮಾಡಬೇಕು, ಮಂತ್ರಿ ಆಗಬೇಕು ಎಂದು ಹೋಗಿದ್ದಾರೆ. ಇವರಿಂದ ರಾಜ್ಯದಲ್ಲಿ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅಮೃತ್ ಶೆಣೈ, ಸಂತೋಷ್ ಕುಲಾಲ್ ಪಕ್ಕಾಲು, ಚರಣ್ ವಿಠಲ ಕುದಿ, ಶಾಂತರಾಮ ಸೂಡ, ಕೃಷ್ಣಾನಂದ್ ನಾಯಕ್, ಸಹನ ಕಾಮತ್, ತಂಗಣ ಸುಧಾಕರ್ ಶೆಟ್ಟಿ, ದಿಲೀಪ್ ಹೆಗ್ಡೆ, ಕಿರಣ್ ಕುಮಾರ್ ಹೆಗ್ಡೆ, ಲಕ್ಷ್ಮೀ ನಾರಾಯಣ ಪ್ರಭು, ದಿನೇಶ್ ಪೂಜಾರಿ ಪೆರ್ಡೂರು, ನಿತಿನ್ ಕುಮಾರ್ ಶೆಟ್ಟಿ, ಶ್ರೀನಿವಾಸ್ ಕುಲಾಲ್, ಅಮರ್ ಕುಲಾಲ್, ರಾಕೇಶ್ ಶೆಟ್ಟಿ ಬೊಮ್ಮರಬೆಟ್ಟು, ರಮೇಶ್ ಪೂಜಾರಿ ಪೆರ್ಡೂರು, ಗಂಪ ರವೀಂದ್ರ ಪೂಜಾರಿ, ಶಶಿಧರ್ ಜತನ್ನ, ಉಮೇಶ್ ಕಾಂಚನ್, ಗಿರೀಶ್ ಕುಮಾರ್ ಉದ್ಯಾವರ, ನೀರೆ ಕೃಷ್ಣಯ್ಯ ಶೆಟ್ಟಿ, ಸಂದೇಶ್ ಶೆಟ್ಟಿ, ರಾಯ್ಸ್ ಉದ್ಯಾವರ, ವಸಂತ್ ಮರ್ಣೆ, ವಿಠಲ ನಾಯ್ಕ್, ಗುರುಧಾಸ್ ಭಂಡಾರಿ, ಗಿರೀಶ್ ಉದ್ಯಾವರ, ಎಚ್. ಶಿವರಾಮ ಶೆಟ್ಟಿ, ಶೇಖರ ಕೋಟ್ಯಾನ್ ಉದ್ಯಾವರ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.