ಬ್ಯಾಂಕಿನಿಂದ 2.69 ಕೋಟಿ ರೂ. ದೋಚಿ ಪರಾರಿಯಾದ ಸಹಾಯಕ ಮ್ಯಾನೇಜರ್!
ಯಲ್ಲಾಪುರ ಸೆ.12: ತಾಲೂಕಿನ ಬ್ಯಾಂಕ್ ಆಫ್ ಬರೋಡಾದ ಶಾಖಾ ಅಸಿಸ್ಟಂಟ್ ಬ್ಯಾಂಕ್ ಮ್ಯಾನೇಜರ್ ಒಬ್ಬ ಬ್ಯಾಂಕಿನಿಂದ ಬರೊಬ್ಬರಿ 2.69 ಕೋಟಿ ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಸದ್ಯ ಹಣ ಕ್ರೆಡಿಟ್ ಆಗಿದ್ದ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ಇದ್ದು, ಆರೋಪಿ ಬ್ಯಾಂಕ್ ನಿಂದ ದೋಚಿರುವ 2.69 ಕೋಟಿ ರೂ. ಹಣವನ್ನು ತನ್ನ ಹೆಂಡತಿ ಅಕೌಂಟ್ಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ.
ಈ ಘಟನೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.