ಸಿದ್ದರಾಮಯ್ಯ ಕಾಲದಲ್ಲಿ ನಡೆದಿದ್ದ ಹಗರಣಗಳ ತನಿಖೆ ಶತಸಿದ್ದ- ನಳಿನ್ ಕುಮಾರ್

ಮೈಸೂರು: ಸಿದ್ದರಾಮಯ್ಯ ಕಾಲದಲ್ಲಿ ನಡೆದಿದ್ದ ಹಗರಣಗಳ ತನಿಖೆ ಶತಸಿದ್ದ. ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರನ್ನು ಒಳಗೆ ಕೂರಿಸುತ್ತೇವೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಗುಡುಗಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು,  ಅರ್ಕಾವತಿ ರೀ ಡೂ, ಹಾಸಿಗೆ ಹಗರಣ, ಇಂಧನ ಇಲಾಖೆ ಹಗರಣ ಇವೆಲ್ಲವನ್ನೂ ಸಿದ್ದರಾಮಯ್ಯ ಮುಚ್ಚಿಡುವ ಕೆಲಸ‌ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಚ್ಚಿಟ್ಟಿದ್ದರು. ಅದನ್ನೆಲ್ಲಾ ಹೊರಗೆ ತೆಗೆಯುವ ಕೆಲಸ ನಾವು ಮಾಡುತ್ತಿದ್ದೇವೆ. ನಾಲ್ಕು ವರ್ಷದಿಂದ ಅದನ್ನು ತೆಗೆಯುವ ಕೆಲಸ ಮಾಡಿದ್ದೇವೆ ಎಂದರು.

ವಿರೋಧ ಪಕ್ಷದಲ್ಲಿದ್ದಾಗಲೂ ಸಿದ್ದರಾಮಯ್ಯ ಹಗರಣದ ವಿರುದ್ದ ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಸಮಾಜವಾದಿ ನೈತಿಕತೆ ಇದ್ದ ಸಿಎಂ ಆಗಿದ್ದರೆ ಅವರೇ ತನಿಖೆ ಮಾಡುತ್ತಿದ್ದರು. ಆದರೆ ಅವರು ಮಾಡಲಿಲ್ಲ ಎಲ್ಲವನ್ನೂ ಮುಚ್ಚಿಟ್ಟರು ಎಂದಿದ್ದಾರೆ

Leave a Reply

Your email address will not be published. Required fields are marked *

error: Content is protected !!