ಶಿರ್ವ ಮಹಿಳಾ ಮಂಡಲ – ಗುರುವಂದನಾ ಕಾರ್ಯಕ್ರಮ
ಶಿರ್ವ: ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಶಿರ್ವ ಮಹಿಳಾ ಮಂಡಲ ಇದರ ತಿಂಗಳ ಕಾರ್ಯಕ್ರಮ ಸರಣಿಯಲ್ಲಿ ಇಂದು ನಡೆದ ಗುರುವಂದನಾ ಕಾರ್ಯಕ್ರಮವು ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು.
ವರ್ಷವಿಡೀ ಒಂದಲ್ಲ ಒಂದು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯೊಂದಿಗೆ ಮುನ್ನಡೆಯುತ್ತಿರುವ ಶಿರ್ವ ಮಹಿಳಾ ಮಂಡಲದ ಸದಸ್ಯರು ಸೆಪ್ಟೆಂಬರ್ ತಿಂಗಳಲ್ಲಿ ಆಯ್ದುಕೊಂಡಿದ್ದು ಗುರುವಂದನಾ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರ್ವ ಪರಿಸರದ ಇಬ್ಬರು ಹಿಂದೂ,ಇಬ್ಬರು ಕ್ರಿಶ್ಚಿಯನ್ ಹಾಗೂ ಇಬ್ಬರು ಮುಸ್ಲಿಂ ಸಮುದಾಯದ ಹೀಗೆ ಒಟ್ಟು 6 ಮಂದಿ ಶಿಕ್ಷಕಿಯರನ್ನು ಅವರವರ ಮನೆಗಳಲ್ಲೇ ಗೌರವಿಸುವ ಕಾರ್ಯಕ್ರಮವು ನಡೆಯಿತು.
ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ 84 ವರ್ಷ ಪ್ರಾಯದ ಹಿರಿಯ ಶಿಕ್ಷಕಿ ಉಮಾವತಿ ಶೆಟ್ಟಿ, ಶಿರ್ವ ಡಾನ್ ಬಾಸ್ಕೋ ಶಾಲೆಯ ನಿವೃತ್ತ ಶಿಕ್ಷಕಿ ಲಿಲ್ಲಿ ತಾವ್ರೋ, ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಶಿರ್ವದ ಚಂದ್ರಪ್ರಭಾ ಹೆಗ್ಡೆ, ಡಾನ್ ಬಾಸ್ಕೋ ಶಾಲೆಯ ನಿವೃತ್ತ ಶಿಕ್ಷಕಿ ವಯೋವೃದ್ಧೆ ಮೆಗ್ದಲಿನ್ ,ಫೈಝಲ್ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯ ಅಧ್ಯಾಪಕಿ ಖೈರುನ್ನೀಸಾ ,ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶಾಹಿಸ್ತಾ ಇವರನ್ನು ಮಹಿಳಾ ಮಂಡಲದ ವತಿಯಿಂದ ಗೌರವಿಸಲಾಯಿತು.
ಗೌರವಾಧ್ಯಕ್ಷರಾದ ಬಬಿತಾ ಜಗದೀಶ್ ಅರಸ, ಅಧ್ಯಕ್ಷರಾದ ಗೀತಾ ವಾಗ್ಳೆ, ಖಜಾಂಚಿ ಮರಿಯಾ ಜೆಸಿಂತಾ ಫುರ್ಟಾಡೋ, ಜೊತೆ ಕಾರ್ಯದರ್ಶಿ ಗೀತಾ ಮೂಲ್ಯ ಜಯಶ್ರೀ ಜಯಪಾಲ್ ಶೆಟ್ಟಿ,ದೀಪಾ ಶೆಟ್ಟಿ,ಮಾಲತಿ ಮುಡಿತ್ತಾಯ,
ಪುಷ್ಪಾ ಆಚಾರ್ಯ,ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಮತಿ ಜಯಪ್ರಕಾಶ್ ಸುವರ್ಣ ಮತ್ತು ಸುನೀತಾ ಸದಾನಂದ್ ಇವರು ಕಾರ್ಯಕ್ರಮ ಆಯೋಜಿಸಿದ್ದರು.