ದಾಖಲೆ ಮುರಿದ ‘ವಂದೆ ಭಾರತ’ ರೈಲು- ಕೇವಲ 52 ಸೆಕೆಂಡ್ 100ಕಿ.ಮೀ. ವೇಗ
ನವದೆಹಲಿ: ಸೆಮಿ ಹೈಸ್ಪೀಡ್ ರೈಲು ‘ವಂದೆ ಭಾರತ’ ಎಕ್ಸ್ಪ್ರೆಸ್ 52 ಸೆಕೆಂಡ್ಗಳಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್ ಟ್ರೇನ್ನ ದಾಖಲೆಯನ್ನು ಮುರಿದಿದೆ.
ಅಹಮದಾಬಾದ್–ಮುಂಬೈ ನಡುವೆ ಶುಕ್ರವಾರ ಈ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಗಂಟೆಗೆ 130 ಕಿ.ಮೀ ವೇಗದೊಂದಿಗೆ ತಡೆರಹಿತವಾಗಿ ಚಲಿಸಿದ ರೈಲು, ಈ ನಗರಗಳ ನಡುವಿನ 491 ಕಿ.ಮೀ. ದೂರವನ್ನು 5 ಗಂಟೆ 14 ನಿಮಿಷಗಳಲ್ಲಿ ಕ್ರಮಿಸಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ತಿಳಿಸಿದೆ.
ನಿಗದಿತ ವೇಳಾಪಟ್ಟಿ ಹಾಗೂ ನಿಲುಗಡೆಗಳೊಂದಿಗೆ ಸಂಚರಿಸಿದ ಸಂದರ್ಭದಲ್ಲಿ ಇಷ್ಟೇ ದೂರವನ್ನು ಈ ರೈಲು 6 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ ಎಂದೂ ತಿಳಿಸಿದ್ದಾರೆ.