ದುಬೈನಿಂದ ವಿಮಾನದಲ್ಲಿ ಬರುತ್ತಿದ್ದ ಮಹಿಳೆ ಮೃತ್ಯು
ದುಬೈನಿಂದ ಪತಿಯೊಂದಿಗೆ ಬರುತ್ತಿದ್ದ ಕೋಟ್ಟಯಂನ ಮಣಿಮಲ ನಿವಾಸಿ ಎಲ್ಸಾ ಮಿನಿ ಆಂಟನಿ ಎಂಬ ಮಹಿಳೆ ವಿಮಾನ ಟೇಕಫ್ ವೇಳೆ ದಿಡೀರ್ ಪ್ರಜ್ಞೆ ಕಳೆದುಕೊಂಡು ಅಸುನೀಗಿದ ಘಟನೆ ನಡೆದಿದೆ.
ಅಸ್ವಸ್ಥ ಮಹಿಳೆಗೆ ಕೂಡಲೇ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ವಿಮಾನ ಕೊಚ್ಚಿಯ ನೆಡುಂಬಾಶೇರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ಗೆ ಮೊದಲೇ ಮಹಿಳೆ ಮೃತಪಟ್ಟಿದ್ದಾರೆ.
ಮೃತದೇಹವನ್ನು ಆಸ್ಪತ್ರೆಗೆ ದಾಖಲಿಸಿ ಕುಟುಂಬಕ್ಕೆ ಹಸ್ತಾಂತರ ಕಾರ್ಯ ನಡೆದಿದೆ ಎಂದು ವರದಿಯಾಗಿದೆ.