ಮಲ್ಪೆ ಕೋಸ್ಟಲ್ ಮಲ್ಟಿ ಪರ್ಪೋಸ್ ಕೋ.ಓ. ಸೊಸೈಟಿ- ಶೇ.8 ಡಿವಿಡೆಂಟ್ ವಿತರಣೆ
ಉಡುಪಿ: ಕೋಸ್ಟಲ್ ಮಲ್ಟಿ ಪರ್ಪೋಸ್ ಕೋ.ಓ. ಸೊಸೈಟಿ ಇದರ ವಾರ್ಷಿಕ ಮಹಾಸಭೆ ಶನಿವಾರ ಕಾರ್ತಿಕ್ ಸಹಜ್ ಸಂಕೀರ್ಣದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಕೋಟ್ಯಾನ್ ಅವರು ವಾರ್ಷಿಕ ವರದಿ ಮಂಡಿಸಿದರು. ಕಳೆದ ಸಾಲಿನಲ್ಲಿ ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಷೇರುದಾರರಿಗೆ ಶೇ 8% ಡಿವಿಡೆಂಟ್ ಘೋಷಿಸಲಾಯಿತು.
ಅಧ್ಯಕ್ಷರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಅವರು ಮಾತನಾಡಿ ಕೋವಿಡ್ ನ ವಿಷಮ ಪರಿಸ್ಥಿತಿಯಲ್ಲಿಯೂ ಸಂಘವು ಲಾಭದಾಯಕ ಹಾದಿಯಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ, ಗ್ರಾಹಕರ ಉಪಯೋಗಕ್ಕಾಗಿ ಪ್ರಾರಂಭಿಸಿದ ಇ-ಸ್ಟಾಂಪಿಗ್ ಸೌಲಭ್ಯಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಮತ್ತು ಇದರಿಂದ ಸದಸ್ಯರಿಗೆ ಬಹಳ ಉಪಯೋಗವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ನೂತನ ಶಾಖೆಯನ್ನು ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದ್ದು ಮಾತ್ರವಲ್ಲದೆ ಮುಂದೆ ಸಂಘದ ಲಾಭಾಂಶದಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ದೇಣಿಗೆ ನೀಡಲಾಯಿತು.ಹಾಗೂ ಸಂಸ್ಥೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಪ್ರೆಸಿಲ್ಲಾ ಪಿರೇರಾ, ಗೌರವ ಸಲಹೆಗಾರ ಸುನೀಲ್ ಸೂಡ, ನಿರ್ದೇಶಕರುಗಳಾದ ನಳಿನಿ, ಕೈಲಾಸ್, ಸುಭಾಸಚಂದ್ರ, ಮಲ್ಲೇಶ್ ಕುಮಾರ್, ಸವಿತಾ, ವಿನೊದ್ ಕುಮಾರ್, ಡಾ.ಅಂಜಲಿ ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ದಯಾನಂದ ಕೊಟ್ಯಾನ್ ಸ್ವಾಗತಿಸಿದರು, ಪ್ರಬಂಧಕರಾದ ರಾಜೇಶ್ ಬಂಗೇರಾ ವಂದಿಸಿದರು.