ಕೋಟ: ದೇವಸ್ಥಾನದಲ್ಲಿ ಕಳವು
ಕೋಟ ಸೆ.9 (ಉಡುಪಿ ಟೈಮ್ಸ್ ವರದಿ): ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀಮಾಹಗಣಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವಸ್ಥಾನದ ಆಡಳಿತ ಟ್ರಸ್ಟಿ ಕೆ.ಶ್ರೀಪತಿ ಭಟ್ ಅವರು ಎಂದಿನಂತೆ ಸೆ.8 ರಂದು ರಾತ್ರಿ ದೇವಸ್ಥಾನಕ್ಕೆ ಬೀಗಹಾಕಿ ಹೋಗಿದ್ದರು. ಆದರೆ ಸೆ.9 ರಂದು ಬೆಳಿಗ್ಗೆ ಮೈಕ್ ಆನ್ ಮಾಡಲು ಬಂದ ಶಿವರಾಮ ಶೆಟ್ಟಿ ಎಂಬವರು ದೇವಸ್ಥಾನದಲ್ಲಿ ಕಳವು ಆಗಿರುವ ಸಂಶಯಗೊಂಡು ಕೆ.ಶ್ರೀಪತಿ ಭಟ್ ರವರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ದೇವಸ್ಥಾನದಕ್ಕೆ ಬಂದ ಶ್ರೀಪತಿ ಭಟ್ ಅವರು ಪರಿಶೀಲಿಸಿದಾಗ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅದರಂತೆ ಸೆ.8 ರಂದು ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ 6,000 ರೂ. ನಗದು ಹಾಗೂ ಕಾಣಿಕೆ ಹುಂಡಿಯ ಅಂದಾಜು 5000 ರೂ ನಗದು ಸಹಿತ 11,000 ರೂ ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.