ಶಿರ್ವ: ಮಗನಿಗೆ ಕೊರೋನಾ ಪಾಸಿಟಿವ್, ಆಘಾತಗೊಂಡ ತಂದೆ ಆತ್ಮಹತ್ಯೆ

ಶಿರ್ವಾ: (ಉಡುಪಿ ಟೈಮ್ಸ್ ವರದಿ) ಮಗನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಸುದ್ದಿ ತಿಳಿದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪುವಿನ ಪುಂಚಲಕಾಡು ಕಳತ್ತೂರಿನಲ್ಲಿ ನಡೆದಿದೆ.


ಸುಂದರ ಮೂಲ್ಯ (60) ಇವರ ದೊಡ್ಡ ಮಗ ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಮಗನಿಗೆ ಇತ್ತೀಚೆಗೆ ಕಾಯಿಲೆ ಉಲ್ಬಣಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾಗ ಕೊರೋನಾ ಪಾಸಿಟಿವ್ ಬಂದಿತ್ತು.


ಮಾಹಿತಿ ತಿಳಿದು ಆಘಾತಗೊಂಡ ಸುಂದರ ಮೂಲ್ಯರು ಮನೆಯಲ್ಲಿ ರಾತ್ರಿ ವೇಳೆ ಯಾವುದೋ ವಿಷ ಪದಾರ್ಥ ಸೇವಿಸಿದ್ದರು. ಮಾಹಿತಿ ತಿಳಿದ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಈ ಬಗ್ಗೆ ಮೃತರ ಮಗ ಸಂತೋಷ ಶಿರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!