ದೇಶದಲ್ಲಿ ಮತ್ತೆ ಗಂಡಾಂತರ…! ಕೋಡಿಮಠದ ಸ್ವಾಮೀಜಿ ಭವಿಷ್ಯ
ಮಂಡ್ಯ ಸೆ.9(ಉಡುಪಿ ಟೈಮ್ಸ್ ವರದಿ): ರಾಜ್ಯದಾದ್ಯಂತ ಮಳೆ ಅನಾಹುತಗಳು ಮುಂದುವರೆಯಲಿದೆ. ದೇಶದಲ್ಲಿ ಸುನಾಮಿ ಬರುವ ಸಾಧ್ಯತೆಯೂ ಇದೆ ಎಂದು ಕೋಡಿಮಠ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಮಂಡ್ಯದ ಕೆಆರ್. ಪೇಟೆಯ ಬೂಕನಕೆರೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭೂಮಿ ಯಿಂದ ಹೊಸ ಜಂತುಗಳು ಉದ್ಭವಿಸಲಿದೆ. ಜನರು ಓಡಾಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ ಎಂದರು ಹಾಗೂ ಹಿಂದೆಯೂ ನಾನು ಕೊರೊನಾ ಬಗ್ಗೆ ಭವಿಷ್ಯ ಹೇಳಿದ್ದೆ, ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ ಎಂದು ತಮ್ಮ ಭವಿಷ್ಯ ವನ್ನು ಸಮರ್ಥಿಸಿಕೊಂಡಿದ್ದಾರೆ.