ಉಡುಪಿ: ಆಟೋರಿಕ್ಷಾ ದರ ಪರಿಷ್ಕರಣೆ ಕುರಿತು ಸಭೆ
ಉಡುಪಿ, ಸೆ.09: ಜಿಲ್ಲೆಯ ಆಟೋರಿಕ್ಷಾ ದರ ಪರಿಷ್ಕರಣೆ ಮತ್ತು 2012 ಏಪ್ರಿಲ್ 21 ರ ಅಧಿಸೂಚನೆ
ಮಾರ್ಪಾಡುಗೊಳಿಸುವ ಕುರಿತು ಸೆಪ್ಟಂಬರ್ 14 ರಂದು ಮಧ್ಯಾಹ್ನ 2.30 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಟೋರಿಕ್ಷಾ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬಳಕೆದಾರರ ವೇದಿಕೆಯವರ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಿದ ಎಲ್ಲಾ ಸಂಘ-ಸ0ಸ್ಥೆ ಮತ್ತು ಸಾರ್ವಜನಿಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಗಳ ಪ್ರಕಟಣೆ ತಿಳಿಸಿದೆ.