ಪರ್ಕಳ: ನೂರೆಂಟು ವರುಷದ ನಿವೃತ್ತ ಸೈನಿಕ ಮೈಕಲ್ ಡಿಸೋಜ ಇನ್ನಿಲ್ಲ

ಪರ್ಕಳ: ಗ್ಯಾಟ್ ಸನ್ ಅಚ್ಯುತ ನಗರ ನಿವಾಸಿ, ನಿವೃತ್ತ ಸೈನಿಕ ಮೈಕಲ್ ಡಿಸೋಜಾ (108) ಇಂದು ನಿಧನರಾದರು.

ಮದ್ರಾಸು ಸರಕಾರ ಇರುವಾಗ ಸೈನ್ಯಕ್ಕೆ ಸೇರಿದ್ದರು ಅವರು ಮೆಕಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಪಿಡಬ್ಲ್ಯೂಡಿ ಇಲಾಖೆಗೆ ಸೇರಿ ಉಡುಪಿ ರಥ ಬೀದಿಯ ಕಾಂಕ್ರೀಟ್ ರಸ್ತೆ, ಮಂಗಳೂರಿನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು. ಉಭಯ ಜಿಲ್ಲೆಯ ಹೆಚ್ಚಿನ ಹಳೆಯದಾದ ಸೇತುಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿ ಕೊಂಡಿದ್ದರು.

ಶತಾಯುಷಿ ಸೈನಿಕ ತಮ್ಮ ಮರಿ ಮಕ್ಕಳನ್ನು ನೋಡುವ ಭಾಗ್ಯ ಕಣ್ತುಂಬಿತು 2024ರ ತನಕ ಮಂಗಳೂರಿನ ಆರ್‌ಟಿಓ ಅವರಿಗೆ (ನಾಲ್ಕು ಚಕ್ರ) ಡ್ರೈವಿಂಗ್ ಲೈಸೆನ್ಸ್ ನೀಡಿತ್ತು. ಎರಡು ದಿನದಲ್ಲಿ ಅಸ್ವಸ್ಥರಾಗಿದ್ದ ಇವರು ಇಂದು ನಿಧನರಾಗಿದ್ದಾರೆ.

ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾದರೆ ಮೈಕಲ್ ಡಿಸೋಜರವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು. ಮಕ್ಕಳಿಲ್ಲದ ಮೈಕಲ್ ಡಿಸೋಜರವರು ತಮ್ಮ ಪರ್ಕಳದ ಸಂಬಂಧಿಕರ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಕೋರಿಕೆಯ ಮೇರೆಗೆ ಅವರನ್ನು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟುರವರು ಕರೆದುಕೊಂಡು ಇಂದ್ರಾಳಿಯಲ್ಲಿ ಇವರ ಲಯನ್ಸ್ ಕ್ಲಬ್ ನ ಜಯಸಿಂಹ ಸಭಾಂಗಣದಲ್ಲಿ ಕೊನೆಯದಾಗಿ ಧ್ವಜಾರೋಹಣ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ ಪರ್ಕಳದ ಅತ್ಯುತ್ತ ನಗರದ ಮನೆಯಲ್ಲಿ ಗೌರವ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ಮಂಗಳೂರಿನಲ್ಲಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!