ಗೋವಾ: ಭೀಕರ ರಸ್ತೆ ಅಪಘಾತ-ಒಂದೇ ಕುಟುಂಬದ ಮೂವರ ಸಾವು, ನಾಲ್ವರ ಗಂಭೀರ
ಗೋವಾ ಸೆ.8 : ಇಲ್ಲಿನ ಕಾಣಕೋಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರವಾರ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಾರವಾರ ತಾಲೂಕಿನ ಮಾಜಾಳಿಯ ಉಲ್ಲಾಸ ನಾಗೇಕರ್, ಅವರ ಪತ್ನಿ ವೀಣಾ ನಾಗೇಕರ್ ಹಾಗೂ ಅವರ ಪುತ್ರ ಹರೀಶ್ ನಾಗೇಕರ್ ಮೃತಪಟ್ಟವರು. ಅಪಘಾತದಲ್ಲಿ ಉಲ್ಲಾಸ್ ಅವರ ಕುಟುಂಬದ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ವಾಸ್ಕೋದಿಂದ ಕುಟುಂಬದ ಒಟ್ಟು ಎಂಟು ಸದಸ್ಯರೊಂದಿಗೆ ಕಾರವಾರದ ಸಾತೇರಿ ದೇವಿಯ ದರ್ಶನ ಮಾಡಿಕೊಂಡು, ವಾಪಸ್ಸು ವಾಸ್ಕೋಗೆ ಕಾರಿನಲ್ಲಿ ತೆರಳುತ್ತಿದ್ದ ಈ ವೇಳೆ ಗೋವಾದ ಕಾಣಕೋಣದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.