ಬ್ರಹ್ಮಾವರ: ಮನೆಯ ಅಂಗಳದಲ್ಲಿ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಬ್ರಹ್ಮಾವರ ಸೆ.8 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಬೈಕಾಡಿಯ ಮನೆಯೊಂದರ ಅಂಗಳದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಬೈಕಾಡಿಯ ಭದ್ರಗಿರಿ ನಿವಾಸಿ ಮಹಮದ್ ಹನೀಫ್ (38) ಎಂದು ಗುರುತಿಸಲಾಗಿದೆ. ಇವರು ಸರಿಯಾಗಿ ಮನೆಗೆ ಬಾರದೇ ಬೈಕಾಡಿ ವಠಾರದ ಬಸ್ಸು ನಿಲ್ದಾಣ ಹಾಗೂ ಇತರ ಕಡೆಗಳಲ್ಲಿ ಮಲಗುತ್ತಿದ್ದು ಅಪರೂಪಕ್ಕೆ ಮನೆಗೆ ಬರುವ ಅಭ್ಯಾಸ ಹೊಂದಿದ್ದರು. ಅವರು 10 ವರ್ಷಗಳಿಂದ ವಿಪರೀತ ಕುಡಿತದ ಅಭ್ಯಾವನ್ನೂ ಹೊಂದಿದ್ದರಿಂದ ಅನ್ನ ಆಹಾರ ಸೇವಿದೇ ಅಥವಾ ಇತರ ಯಾವುದೋ ಕಾರಣದಿಂದ ಸೆ.3 ರಿಂದ ಸೆ.7ರ ನಡುವಿನ ಅವಧಿಯಲ್ಲಿ ಬೈಕಾಡಿ ಗ್ರಾಮದ ವನಜ ಶೆಟ್ಟಿ ಎಂಬವರ ಮನೆಯ ಜಗಲಿಯಲ್ಲಿ ಮಲಗಿದಲ್ಲಿ ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಅಣ್ಣ ಮಹಮದ್ ಇರ್ಷಾದ್ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.