ಕೋಟ: ಮನೆಗೆ ನುಗ್ಗಿ11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4.05 ಲಕ್ಷ ನಗದು ಕಳವು

ಕಡತ ಚಿತ್ರ
ಕೋಟ ಸೆ.8(ಉಡುಪಿ ಟೈಮ್ಸ್ ವರದಿ): ಸಾಸ್ತಾನ ಪಾಂಡೇಶ್ವರದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 4.05 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬ್ರಹ್ಮಾವರ ತಾಲೂಕಿನ ಕೋಟದ ಸಾಸ್ತಾನ ನಿವಾಸಿ ರಾಜೇಶ್ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿನ ಮಡಿವಾಳದಲ್ಲಿ ಹೋಟೇಲ್ ವ್ಯವಹಾರ ಮಾಡಿಕೊಂಡಿರುವ ರಾಜೇಶ್ ಪೂಜಾರಿ ಅವರು ಮೇ.4 ರಂದು ಮದುವೆ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದು, ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸು ಬೆಂಗಳೂರಿಗೆ ಹೋಗುವಾಗ ತಮ್ಮ ಹೆಂಡತಿ ಹಾಗೂ ಮಗುವಿನ 11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಮನೆಯ ರಿಪೇರಿಗಾಗಿ 4,05,000 ರೂ. ನಗದನ್ನು ತಮ್ಮ ಮೂಲಮನೆಯಾದ ಸಾಸ್ತಾನದ ಪಾಂಡೇಶ್ವರದ ಮನೆಯ ಗೋಡ್ರೇಜ್ ನಲ್ಲಿ ಇಟ್ಟು ಹೋಗಿದ್ದರು.

ಸೆ.7 ಬೆಳಿಗ್ಗೆ ರಾಜೇಶ್ ಪೂಜಾರಿ ಅವರ ಚಿಕ್ಕಪ್ಪ ಸುಬ್ಬಣ್ಣ ಪೂಜಾರಿ ರವರು ಮನೆಯ ಕಲ್ಲುಕುಟಿಗ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದ ವೇಳೆ ರಾಜೇಶ್ ಪೂಜಾರಿ ಅವರ ಮನೆಯ ಬಳಿ ಬಂದಾಗ ಬಾಗಿಲಿಗೆ ಚಿಲಕ ಹಾಕಿ ಲಾಕ್ ಹಾಕದೇ ಇರುವುದು ಕಂಡು ಬಂದಿದೆ. ಬಳಿಕ ಬಾಗಿಲು ತೆರೆದು ಮನೆಯ ಒಳ ಹೋಗಿದ್ದಾರೆ. ಈ ವೇಲೆ ಮನೆಯ ಕೋಣೆಗಳಲ್ಲಿದ್ದ ಗೋಡ್ರೇಜ್ ಮಾತ್ರ ತೆರೆದುಕೊಂಡಿರುವುದು ಕಂಡು ಬಂದಿದ್ದು ಕಳವು ನಡೆದಿರಬಹುದೆಂಬ ಸಂಶಯದಿಂದ ರಾಜೇಶ್ ಅವರ ತಮ್ಮನಿಗೆ ಮಾಹಿತಿ ನೀಡಿದ್ದರು.

ನಂತರ ಅವರು ಬಂದು ಪರಿಶೀಲಿಸಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಇಂದು ರಾಜೇಶ್ ಪೂಜಾರಿ ಅವರು ಬಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇಟ್ಟಿದ್ದ ಸುಮಾರು 11.50 ಲಕ್ಷ ಮೌಲ್ಯದ ಒಟ್ಟು 291 ಗ್ರಾ. ಚಿನ್ನದ ಆಭರಣಗಳು ಮತ್ತು ಹಳೆ ಮನೆ ರಿಪೇರಿಗೆಂದು ತಂದಿಟ್ಟಿದ್ದ 4,05,000 ರೂ. ನಗದು ಹಣ ಕಳವು ಆಗಿದೆ ಎಂದು ತಿಳಿದು ಬಂದಿದೆ.

ಅದರಂತೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಕೋಣೆಯಲ್ಲಿದ್ದ 2 ಗೋಡ್ರೇಜ್ ಗಳನ್ನು ಒಡೆದು ಅದರಲ್ಲಿದ್ದ ಸುಮಾರು 11.50 ಲಕ್ಷ ಮೌಲ್ಯದ ಒಟ್ಟು 291 ಗ್ರಾಮ್ ಚಿನ್ನದ ಆಭರಣಗಳು ಮತ್ತು ರೂ. 4,05,000 ನಗದು ಹಣ ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ರಾಜೇಶ್ ಪೂಜಾರಿ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

Leave a Reply

Your email address will not be published. Required fields are marked *

error: Content is protected !!