ರಾಜಕೀಯ ಪ್ರೇರಿತವಾಗಿ ಎನ್ಐಎ ಕೆಲಸ ಮಾಡುತ್ತಿದೆ- ರಿಯಾಝ್ ಫರಂಗಿಪೇಟೆ
ಮಂಗಳೂರು ಸೆ.8: ರಾಜಕೀಯ ಪ್ರೇರಿತವಾಗಿ ಎನ್ ಐಎ ತನಿಖಾ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎನ್ಐಎ ಸರ್ಕಾರದ ಅಣತಿಯಂತೆ ಕೆಲಸಮಾಡುತ್ತಿದೆ ನಾನು ಬಿಹಾರದಲ್ಲಿ ಎಸ್ ಡಿಪಿಐ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿ ಇರುವುದರಿಂದ ಬಿಹಾರ ರಾಜ್ಯ ಸಮಿತಿ ಮೀಟಿಂಗ್ ನಲ್ಲಿ ಭಾಗವಹಿಸುತ್ತಿದ್ದೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗಡಿಬಿಡಿ ಮಾಡುವ ಊಹಾಪೋಹದಿಂದ ಬಿಹಾರದಲ್ಲಿ ಪಕ್ಷದ ಐದು ಮಂದಿಯನ್ನು ಬಂಧನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಪೂರಕ ಪರಿಶೀಲನೆ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನೂ ಬಂಧನ ಮಾಡಿದ್ದರು. 2047 ಇಸ್ಲಾಂ ರಾಷ್ಟ್ರ ಸಂಬಂಧ ಪಟ್ಟಂತೆ ಫೌಂಡೇಶನ್ ಬುಕ್ ಲೇಟ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ಸಂಬಂಧಪಟ್ಟ ಸಂಘಟನೆ ಹೇಳಿಕೆ ನೀಡಿದೆ. ಪಿಎಫ್ ಐ ಕೂಡಾ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಉ.ಪ್ರದೇಶದಲ್ಲಿ ಆದ ಬುಕ್ ಲೇಟ್ ನ ಒಂದು ಕಾಪಿಯನ್ನು ಈ ಬುಕ್ ಲೇಟ್ ಗೆ ಇಡಲಾಗಿತ್ತು. ಕೇಂದ್ರ ಸರ್ಕಾರ ಪ್ರೇರಿತವಾಗಿ ಈ ಕಾರ್ಯ ಮಾಡಲಾಗಿತ್ತು ಎಂದರು.
ನಿವಾಸದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ನನ್ನ ಮತ್ತು ನನ್ನ ಪತ್ನಿಯ ಮೊಬೈಲ್ ನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂದೆಯೂ ತನಿಖೆಗೆ ಸಹಕಾರ ನೀಡುತ್ತೇನೆ. ಎನ್ಐಎ ತನಿಖೆ ಪಾರದರ್ಶಕವಾಗಿರಲಿ ಎಂದರು.