ಕುಂದಾಪುರ: ಸೈಕಲ್, ಮೊಬೈಲ್ ಇಟ್ಟು ನದಿಗೆ ಹಾರಿದ ಯುವಕ
ಕುಂದಾಪುರ ಸೆ.8: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸಂಗಮ್ ಸೇತುವೆಯ ಮೇಲೆ ಸೈಕಲ್ ಇಟ್ಟು ಪಂಚಗಂಗಾವಳಿ ನದಿಗೆ ಯುವಕನೋರ್ವ ಹಾರಿರುವ ಘಟನೆ ಇಂದು ನಡೆದಿದೆ.
ನದಿಗೆ ಹಾರಿರುವ ಯುವಕನನ್ನು ಸಾಯಿಷ್ ಎಂದು ಗುರುತಿಸಲಾಗಿದೆ.
ಕುಂದಾಪುರ ಸಂಗಮ್ ಸೇತುವೆ ಮೇಲಿಂದ ಈತ ನದಿಗೆ ಹಾರಿದ್ದನ್ನು ಗಮನಿಸಿದ ವಾಹನ ಸವಾರರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ನದಿಗೆ ಹಾರುವ ಮೊದಲು ಈ ಯುವಕ ಮೊಬೈಲ್ ಫೋನ್ ಸೇತುವೆ ಮೇಲೆ ಇಟ್ಟಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ನದಿಗೆ ಹಾರಿ ನೀರು ಪಾಲಾಗಿರುವ ಯುವಕನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.