ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ- ಮೂವರ ವಿರುದ್ಧ ದೂರು
ಗಂಗೊಳ್ಳಿ ಸೆ.8(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆಕಾಶ್ ಹಳಿಯಾಳ್, ಕಾರ್ತಿಕ್, ಪುರುಷೋತ್ತಮ್ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಲ ಯುವಕರು ತ್ರಾಸಿಯ ಪ್ರವಾಸಿ ಮಂದಿರದ ಬಳಿಯ ಬೀಚ್ ನಲ್ಲಿ ಸೇರಿಕೊಂಡು ಗಾಂಜಾ ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸರು, ಸ್ಥಳಕ್ಕೆ ತೆರಳಿ 7 ಮಂದಿ ಯುವಕರನ್ನು ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷಗೆ ಒಳಪಡಿಸಿದ್ದರು. ಈ 7 ಮಂದಿ ಪೈಕಿ ಪ್ರಕರಣಕ್ಕೆ ಸಂಬಂಧಿಸಿ ಆಕಾಶ್ ಹಳಿಯಾಳ್, ಕಾರ್ತಿಕ್, ಪುರುಷೋತ್ತಮ್ ಎಂಬ ಮೂವರು ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.