ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಅಧ್ಯಕ್ಷರಾಗಿ ರವಿಚಂದ್ರ ಆಚಾರ್ಯ ಮಾರಳಿ ಆಯ್ಕೆ

ಉಡುಪಿ ಸೆ.8(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ 2022- 24ನೇ ಸಾಲಿನ ನೂತನ ಅಧ್ಯಕ್ಷರಾಗಿ ರವಿಚಂದ್ರ ಆಚಾರ್ಯ ಮಾರಳಿ ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, 

ಸಂಘದ ಗೌರವ ಅಧ್ಯಕ್ಷರಾಗಿ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಉಪಾಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ ನೇಜಾರು,  ಪ್ರಧಾನ ಕಾರ್ಯದರ್ಶಿಯಾಗಿ ರಘುನಾಥ್ ಆಚಾರ್ಯ ಉಡುಪಿ, ಜೊತೆ ಕಾರ್ಯದರ್ಶಿ ರಾಜೇಶ್ ಆಚಾರ್ಯ ಸುಭಾಷ್ ನಗರ, ಕೋಶಾಧಿಕಾರಿ ದಿವಾಕರ.ವಿ ಆಚಾರ್ಯ ಒಳಕಾಡು, ಕಾನೂನು ಸಲಹೆಗಾರರಾಗಿ ಉಡುಪಿ ನ್ಯಾಯವಾದಿ ಗಂಗಾಧರ ಎಚ್.ಎಂ ಅವರನ್ನು ಆಯ್ಕೆ ಮಾಡಲಾಗಿದೆ.

ಇವರ ಜೊತೆಗೆ ಸಂಘಟನಾ ಕಾರ್ಯದರ್ಶಿಯಾಗಿ ಅರುಣ್ ಆಚಾರ್ಯ ಉಡುಪಿ, ರಾಜೇಶ್ ಆಚಾರ್ಯ ಚಿಟ್ಪಾಡಿ, ಹರೀಶ್ ಆಚಾರ್ಯ ಕಳತ್ತೂರು, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ ಕುಕ್ಕಿಕಟ್ಟೆ, ಜಯಪ್ರಕಾಶ್ ಆಚಾರ್ಯ ಕುತ್ಪಾಡಿ, ಅರುಣ್ ಆಚಾರ್ಯ ಪೆರ್ಡೂರು, ಸಾಂಸ್ಕೃತಿಕ ಕಾರ್ಯದರ್ಶಿಯ ಉಮೇಶ್ ಆಚಾರ್ಯ ದೊಡ್ಡಣಗುಡ್ಡೆ, ಹರೀಶ್ ಆಚಾರ್ಯ ಉಪ್ಪುರು, ಸದಾಶಿವ ಆಚಾರ್ಯ ಬುಡ್ನಾರು ಇವರನ್ನು ಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರತ್ನಾಕರ ಆಚಾರ್ಯ ಕುರ್ಕಾಲು, ರಾಜಾರಾಮ್ ಶೇಟ್ ಉಡುಪಿ, ರಮೇಶ್ ಆಚಾರ್ಯ (ಆಭರಣ), ಜಗದೀಶ್ ಆಚಾರ್ಯ ಬೆಳ್ಳಂಪಳ್ಳಿ, ದಿನೇಶ್ ಆಚಾರ್ಯ ಅಲೆವೂರು, ಮನೋಜ್ ಆಚಾರ್ಯ ಎರ್ಮಾಳು, ಸುರೇಶ್ ಆಚಾರ್ಯ ಹೆಬ್ರಿ, ಸುರೇಶ್ ಆಚಾರ್ಯ ಬ್ರಹ್ಮಾವರ, ಸಂತೋಷ್ ಆಚಾರ್ಯ ಕೊಳಲಗಿರಿ, ರಾಘವೇಂದ್ರ ಆಚಾರ್ಯ ಹರಿಖಂಡಿಗೆ, ಸಚ್ಚಿದಾನಂದ ಆಚಾರ್ಯ ನೇಜಾರು, ಪ್ರಸನ್ನ ಆಚಾರ್ಯ ಮುನಿಯಾಲು, ಕೇಶವ ಆಚಾರ್ಯ ಸಗ್ರಿ, ದಿನೇಶ್ ಆಚಾರ್ಯ, ಕೀಳಿಂಜೆ, ಪ್ರಕಾಶ್ ಆಚಾರ್ಯ ಕಟಪಾಡಿ, ಪ್ರಕಾಶ್ ಆಚಾರ್ಯ, ಕೀಳಂಜೆ, ಸುರೇಶ್ ಆಚಾರ್ಯ ಹರಿಖಂಡಿಗೆ,ಸತೀಶ್ ಆಚಾರ್ಯ ಪಡುಬಿದ್ರಿ ಅವರನ್ನು ಆಯ್ಕೆ ಮಾಡಲಾಯಿತು.

ಹಾಗೂ ಸಲಹಾ ಸಮಿತಿ ಸದಸ್ಯರಾಗಿ ನಾಗರಾಜ್‌ ಆಚಾರ್ಯ ಕಾಡಬೆಟ್ಟು, ಕಿಶೋರ್ ಆರ್. ಆಚಾರ್ಯ‌ ಉಡುಪಿ, ಟಿ.ಜಿ. ಪ್ರಭಾಕರ ಆಚಾರ್ಯ ಉಡುಪಿ, ವೆಂಕಟೇಶ ಆಚಾರ್ಯ, ಕುತ್ಪಾಡಿ, ರಾಮ್‌ ದಾಸ್ ಶೇಟ್, ಸತೀಶ್‌ ಶೇಟ್ ಉಡುಪಿ,  ಜಗದೀಶ್ ಆಚಾರ್ಯ ಕಪ್ಪೆಟ್ಟು, ದಯಾನಂದ ಆಚಾರ್ಯ ಕರಂಬಳ್ಳಿ, ಜಯಕರ ಆಚಾರ್ಯ ಕರಂಬಳ್ಳಿ ಅವರನ್ನ  ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!