ಶಾಲಾ ಬಸ್’ಗಳ ಮುಖಾಮುಖಿ ಡಿಕ್ಕಿ- ಹಲವು ಮಕ್ಕಳಿಗೆ ಗಾಯ
ಮಡಿಕೇರಿ ಸೆ.8: ತಾಲೂಕಿನ ನಾಪೋಕ್ಲು ಗ್ರಾಮದ ಸಮೀಪ ಎರಡು ಶಾಲಾ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಹಲವು ಮಕ್ಕಳು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಮಡಿಕೇರಿಯ ಅಂಕುರ್ ಶಾಲೆ ಹಾಗೂ ಶ್ರೀರಾಮ್ ಟ್ರಸ್ಟ್ ಶಾಲೆಗೆ ಸೇರಿದ 2 ಬಸ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಅಂಕುರ್ ಶಾಲೆಯ ಬಸ್ಸಿನ ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿವೆ. ಬಸ್ಸಿನಲ್ಲಿದ್ದ ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕ ಹಾಗೂ ಮಕ್ಕಳನ್ನು ತಕ್ಷಣ ನಾಪೋಕ್ಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ