ಮಲ್ಪೆ ಬಂದರು ರಸ್ತೆಯ ತಡೆಗೋಡೆ ತೆರವು- ಕಬ್ಬಿಣದ ಸರಳುಗಳಿಂದ ಅಪಘಾತಕ್ಕೆ ಆಹ್ವಾನ

ಮಲ್ಪೆ ಸೆ.8 (ಉಡುಪಿ ಟೈಮ್ಸ್ ವರದಿ): ಬಂದರಿನ ಸುಮುಖ ಐಸ್ ಪ್ಲಾಂಟ್ ಎದುರುಗಡೆ ಇರುವ ರಸ್ತೆಯ ತಡೆಗೋಡೆಯನ್ನು ತೆರವು ಮಾಡಲಾಗತ್ತಿದೆ ಆದರೆ ಡಿವೈಡರ್ ನಿರ್ಮಾಣ ವೇಳೆ ಹಾಕಲಾಗಿದ್ದ ಕಬ್ಬಿಣದ ಸರಳುಗಳನ್ನು ಅರ್ಧದಲ್ಲೇ ತುಂಡರಿಸಿ ಬಿಟ್ಟಿದ್ದು, ಈ ರಸ್ತೆಯಲ್ಲಿ  ಸಂಚರಿಸುವ ವಾಹನ ಸವಾರರಿಗೆ ಅಪಾಯದ ಮುನ್ಸೂಚನೆ ನೀಡುತ್ತಿದೆ.

ಈ ರಸ್ತೆಯಲ್ಲಿ ಟೆಂಪೋ ಹಾಗೂ ದ್ವಿಚಕ್ರ ವಾಹಗಳು ಸೇರಿದಂತೆ ಇತರ ನೂರಾರು ವಾಹನಗಳು ದಿನದಿತ್ಯ ಚಲಿಸುತ್ತದೆ. ರಸ್ತೆಯಲ್ಲಿ ಡಿವೈಡರ್ ತೆರವು ವೇಳೆ ಅರ್ಧ ತುಂಡರಿಸಿ ಬಿಟ್ಟಿರುವ ಕಬ್ಬಿಣ ಸರಳುಗಳ ತುದಿಗಳು ರಸ್ತೆಯಲ್ಲಿ ಮೇಲ್ಮುಖವಾಗಿ ಗೋಚರಿಸುತ್ತಿದ್ದು, ಇದರಿಂದ ಈಗಾಗಲೇ ಹಲವು ವಾಹನಗಳ ಚಕ್ರಗಳು ಪಂಚರ್ ಆಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಕ್ರ ಇದೇ ರೀತಿ ಪಂಚರ್ ಆದರೆ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ರಸ್ತೆ ಮಧ್ಯವೇ ಕಬ್ಬಿಣದ ಸರಳುಗಳನ್ನು ಅರ್ಥ ಕಟ್ ಮಾಡಿ ಹಾಗೇ ಬಿಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ ಹಾಗೂ ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!