ಮಣಿಪಾಲ: ಫ್ಲಾಟ್’ನ ನಕಲಿ ದಾಖಲೆ ಸೃಷ್ಟಿಸಿ ಓನರ್ಸ್ ಅಸೋಶಿಯೇಶನ್ ನಿಂದ ವಂಚನೆ
ಮಣಿಪಾಲ ಸೆ.7(ಉಡುಪಿ ಟೈಮ್ಸ್ ವರದಿ): ಈಶ್ವರ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ ತಾಜ್ ರೆಸಿಡೆನ್ಸಿಯ ಫ್ಲಾಟ್ ನ್ನು ನಕಲಿ ದಾಖಲೆ ಸೃಷ್ಟಿಸಿ ರೆಸಿಡೆನ್ಸಿಯ ಓನರ್ಸ್ ಅಸೋಶಿಯೇಶನ್ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಮೂವರ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಅಬ್ದುಲ್ ಸತ್ತಾರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ 2010 ರ ಜೂ.25 ರಂದು ಅಬ್ದುಲ್ ಸತ್ತಾರ್ ಎಂಬವರು ಹೆರ್ಗಾ ಗ್ರಾಮದ ಈಶ್ವರ ನಗರ ತಾಜ್ ರೆಸಿಡೆನ್ಸಿಯ ಪ್ಲ್ಯಾಟ್ ನಂ:301 ನ್ನು ಆರೋಪಿ ತಜ್‍ಮುಲ್ ಹುಸೇನ್ ನು ಖರೀದಿಸಿದ್ದರು. ಆರೋಪಿಗಳಾದ ತಾಜ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್ಸ್ ಓನರ್ಸ್ ಅಸೋಶಿಯೇಶನ್ ಇದರ ಅಧ್ಯಕ್ಷ ತಜ್‍ಮುಲ್ ಹುಸೇನ್, ಕಾರ್ಯದರ್ಶಿ ಉಮಾ ಗೌಡ್ ಹಾಗೂ ಜಿಪಿಎ ಹೋಲ್ಡರ್ ಶಂಶುದ್ದೀನ್ ಇವರು ಅಬ್ದುಲ್ ಸತ್ತಾರ್ ಅವರ ನಕಲಿ ಸಹಿ ಹಾಗೂ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಅಸಲಿ ದಾಖಲಾತಿಗಳೆಂದು ಉಡುಪಿ ಜಿಲ್ಲಾ ರಿಜಿಸ್ಟ್ರಾರ್ ಅಪ್ ಸೊಸೈಟೀಸ್ ನಲ್ಲಿ ನೀಡಿ ತಾಜ್ ರೆಸಿಡೆನ್ಸಿ ಓನರ್ಸ್ ಅಸೋಶಿಯೇಶನ್ ನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂಬದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅಬ್ದುಲ್ ಸತ್ತಾರ್ ಅವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.