ಕರ್ತವ್ಯದಲ್ಲಿರುವಾಗಲೇ ಬಸ್ ನಿರ್ವಾಹಕ ಮೃತ್ಯು
ಮಂಗಳೂರು, ಸೆ.7(ಉಡುಪಿ ಟೈಮ್ಸ್ ವರದಿ): ಬಸ್ಸಿನಲ್ಲಿ ಕರ್ತವ್ಯದಲ್ಲಿ ಇರುವಾಗಲೇ ನಿರ್ವಾಹಕರೊಬ್ಬರು ಮೃತಪಟ್ಟ ಘಟನೆ ಕಾಟಿಪಳ್ಳ ಕೈಕಂಬದಲ್ಲಿ ನಡೆದಿದೆ.
ಶ್ರೀಭವಾನಿ ಟ್ರಾವೆಲ್ಸ್ ಬಸ್ಸಿನ ನಿರ್ವಾಹಕರಾದ ಕಾಟಿಪಳ್ಳದ ನಿವಾಸಿ ಭರತ್ ಮೃತಪಟ್ಟವರು.
ಅವರು ಇಂದು ಬಸ್ಸಿನಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.