ಉಡುಪಿ: ತುಳುಕೂಟ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ
ಉಡುಪಿ ಸೆ.7: ಸಾಂಸ್ಕøತಿಕ ಕಲಾಸಂಸ್ಥೆ ತುಳುಕೂಟ ಉಡುಪಿ ಇದರ 2022-23ನೇ ನೂತನ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ ಗೊಂಡಿದ್ದಾರೆ.
ತುಳು ಕೂಟದ ಉಪಾಧ್ಯಕ್ಷರಾಗಿ ದಿವಾಕರ ಸನಿಲ್ ಹಾಗೂ ಸದಾಶಿವ ಭಟ್, ಪ್ರಧಾನಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳನ್ನು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.