ಉಡುಪಿ: ಎಸ್‌ಡಿಎಂ ಆಯುರ್ವೇದ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ
ಉಡುಪಿ: ಕುತ್ಪಾಡಿಯಲ್ಲಿರುವ ಎಸ್‌ಡಿಎಂ ಆಯುರ್ವೇದ ಫಾರ್ಮಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಆಯುಷ್ ಕ್ವಾಥ (ಮೂಲಿಕೆಗಳ ಕಷಾಯ) ಚ್ಯವನಪ್ರಾಶ ಲೇಹ (ತಾಜಾ ನೆಲ್ಲಿಕಾಯಿ ಮತ್ತು ಅಷ್ಟವ ರ್ಗಯುಕ್ತ) ಹಾಗೂ ಅಶ್ವಗಂಧ ಕ್ಯಾಪ್ಸುಲ್‌ಗಳು ಸಾಂಕ್ರಮಿಕ ರೋಗದ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ವೃದ್ಧಿಸುವಲ್ಲಿ ಸಹಕಾರಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ ಎಂದು ಫಾರ್ಮಿಸಿಯ ಮಹಾ ಪ್ರಬಂಧಕ ಡಾ.ಮುರಳೀಧರ ಬಲ್ಲಾಳ್ ತಿಳಿಸಿದ್ದಾರೆ.
ಹೆಚ್ಚಿನ ಬೇಡಿಕೆಯಿಂದಾಗಿ ವ್ಯಾದಿ ಪ್ರತಿರೋಧಕ ಔಷಧಿಗಳು ಎಲ್ಲೆಡೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಔಷಧವನ್ನು ಬಳಕೆ ಮಾಡಿದವರು ಗುಣಮಟ್ಟ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಜ್ವರದ ನಂತರ ದೇಹದಲ್ಲಿ ಕಾಣಿಸುವ ನೋವು, ಅಸ್ವಸ್ಥತೆ, ನಿಶ್ಯಕ್ತಿ ಅಥವಾ ನಿತ್ರಾಣತೆ ಹೋಗಲಾಡಿಸಲು ಚ್ಯವನಪ್ರಾಶ ಲೇಹ, ಗುಡುಚಿ (ಅಮೃತಬಳ್ಳಿ) ಕ್ಯಾಪ್ಸುಲ್ ಮತ್ತು ಕೈಶೋರ ಗುಗ್ಗುಳು ಮಾತ್ರೆಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಪಡೆಯಬಹುದು. ರೋಗಿಗಳು ಕುಟುಂಬ ಆಯುರ್ವೇದ ವೈದ್ಯರ ಸಲಹೆಯೊಂದಿಗೆ ಎಸ್‌ಡಿಎಂ ಸಂಸ್ಥೆ ತಯಾರಿಸುವ ಔಷಧಿಗಳನ್ನು ಬಳಸಬಹುದು ಎಂದು ಡಾ.ಮುರಳೀಧರ ಬಲ್ಲಾಳ್ ಮನವಿ ಮಾಡಿದ್ದಾರೆ.