ದಯವಿಟ್ಟು ಸರಕಾರದ ಸಿಮೆಂಟ್ ಕದಿಯಬೇಡಿ: ಮಿಥುನ್ ರೈ
ಉಡುಪಿ: ಕೊರೊನಾ ಪಿಡುಗು ಜನರಿಗೆ ಸಂಕಷ್ಟ ತಂದೊಡ್ಡಿದರೆ, ಬಿಜೆಪಿ ಸರ್ಕಾರಕ್ಕೆ ಹಣ ಮಾಡಲು ಅವಕಾಶ ಸಿಕ್ಕಂತಾಗಿದೆ. ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಆಹಾರದ ಕಿಟ್, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ದಾಖಲೆಗಳ ಸಮೇತ ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಬಿಜೆಪಿ ನಾಯಕರು ಉತ್ತರಿಸುತ್ತಿಲ್ಲ. ಸರ್ಕಾರದ ಬಳಿ ಲೆಕ್ಕ ಕೇಳಿದವರನ್ನು ನಿಂದಿಸಲಾಗುತ್ತಿದೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಮಿಥುನ್ ರೈ ಆರೋಪಿಸಿದರು.
ಉಡುಪಿಯಲ್ಲಿ ಶಾಸಕರ ಬೆಂಬಲಿಗರು ಮರಳು ದಂಧೆಯಲ್ಲಿ ತೊಡಗಿದ್ದರೆ, ಮತ್ತೊಬ್ಬ ಶಾಸಕರ ಹೆಸರು ಸಿಮೆಂಟ್ ಅವ್ಯವಹಾರದಲ್ಲಿ ಕೇಳಿಬಂದಿದೆ’ ಎಂದು ‘ಸೌಹಾರ್ದದ ನೆಲವಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮ, ಕೋಮು ದ್ವೇಷದ ವಿಷಬೀಜ ಬಿತ್ತಲಾಗಿದೆ. ಈ ನೆಲದಲ್ಲಿ ಮತ್ತೆ ಪ್ರಗತಿಪರ ಚಿಂತನೆಗಳು ಮೂಡಬೇಕು’ ಮಿಥುನ್ ರೈ ಅಭಿಪ್ರಾಯಪಟ್ಟರು.
ಸೋಲು ಶಾಶ್ವತವಲ್ಲ, ಯಶಸ್ಸಿನ ಆರಂಭ. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉಭಯ ಜಿಲ್ಲೆಗಳು ಬಿಜೆಪಿ ಮುಕ್ತವಾಗುವ ಕಾಲ ದೂರವಿಲ್ಲ ಎಂದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿದ್ಯಾ ಬಾಲಕೃಷ್ಣ ಮಾತನಾಡಿ, ‘6 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ಒಡೆದು ಆಳುವುದಕ್ಕೆ ಒತ್ತು ನೀಡಿದರೇ ಹೊರತು, ಅಭಿವೃದ್ಧಿಯ ಕಡೆ ಗಮನ ಹರಿಸಲಿಲ್ಲ. ತೈಲ ಬೆಲೆ ಏರಿಕೆ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತೈಲ ಬೆಲೆ ಇಳಿಸುವುದಕ್ಕೆ ಬದಲು ಹೆಚ್ಚಿಸುತ್ತಿದೆ. ಚುನಾವಣಾ ಆಯೋಗ, ಇಡಿ, ಆರ್‌ಬಿಐ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಖರೀದಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.
‘ಕರ್ನಾಟಕದಲ್ಲಿ ಕೊರೊನಾ ಪಿಡುಗಿನ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಜನರ ಹಣವನ್ನು ಲೂಟಿ ಮಾಡಲಾಗಿದೆ. ಸರ್ಕಾರದ ವಿರುದ್ಧ ಮುಖಂಡರು, ಕಾರ್ಯಕರ್ತರು ಧನಿ ಎತ್ತಬೇಕು. ಸಂವಿಧಾನದ ರಕ್ಷಣೆ, ಜಾತ್ಯತೀತತೆ, ಕೋಮು ಸಾಮರಸ್ಯ ಮೂಡಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ’ ಎಂದರು.
ಕೊರೊನಾ ಪಿಡುಗು ಜನರಿಗೆ ಸಂಕಷ್ಟ ತಂದೊಡ್ಡಿದರೆ, ಬಿಜೆಪಿ ಸರ್ಕಾರಕ್ಕೆ ಹಣ ಮಾಡಲು ಅವಕಾಶ ಸಿಕ್ಕಂತಾಗಿದೆ. ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಆಹಾರದ ಕಿಟ್, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ದಾಖಲೆಗಳ ಸಮೇತ ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಬಿಜೆಪಿ ನಾಯಕರು ಉತ್ತರಿಸುತ್ತಿಲ್ಲ. ಸರ್ಕಾರದ ಬಳಿ ಲೆಕ್ಕ ಕೇಳಿದವರನ್ನು ನಿಂದಿಸಲಾಗುತ್ತಿದೆ.
ಉಡುಪಿಯಲ್ಲಿ ಶಾಸಕರ ಬೆಂಬಲಿಗರು ಮರಳು ದಂಧೆಯಲ್ಲಿ ತೊಡಗಿದ್ದರೆ, ಮತ್ತೊಬ್ಬ ಶಾಸಕರ ಹೆಸರು ಸಿಮೆಂಟ್ ಅವ್ಯವಹಾರದಲ್ಲಿ ಕೇಳಿಬಂದಿದೆ. ಅವಿಭಜಿತ ಜಿಲ್ಲೆಯ ಯುವ ಕಾಂಗ್ರೆಸ್ ನ ಪ್ರತಿಯೊಂದು ಕಾರ್ಯಕರ್ತರು ಕಾಲು ಕೆ.ಜಿ ಸಿಮೆಂಟ್ ನೀಡಲು ಸಿದ್ಧರಾಗಿದ್ದೇವೆ. ದಯವಿಟ್ಟು ಸರಕಾರದ ಸಿಮೆಂಟ್ ಕದಿಯಬೇಡಿ ಎಂದು ರೈ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಂಪರಾಜ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ವಿಜಯ ಪೂಜಾರಿ, ರಮೇಶ್ ಕಾಂಚನ್, ಸಿದ್ದಿಕ್ ಕಂದಕ್, ಅಜೀದ್ ಹೆಜ್ಮಾಡಿ, ಯೋಗೀಶ್ ಆಚಾರ್ಯ ಇದ್ದರು.