ಪಿಎಸ್‍ಐ ನೇಮಕಾತಿಗೆ 15 ಲಕ್ಷ ರೂ. ಪಡೆದ ಬಿಜೆಪಿ ಶಾಸಕ- ಆಡಿಯೋ ವೈರಲ್!

ಕೊಪ್ಪಳ ಸೆ.5: ಪಿಎಸ್‍ಐ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ 15 ಲಕ್ಷ ಪಡೆದಿರುವುದಾಗಿ ಕೊಪ್ಪಳದ ಶಾಸಕರೊಬ್ಬರ ಮೇಲೆ ಆರೋಪ ಕೇಳಿಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹಣ ನೀಡಿದ ವ್ಯಕ್ತಿ ಶಾಸಕರೊಂದಿಗೆ ಮಾತನಾಡುತ್ತಿರುವುದು ಎನ್ನಲಾದ ಆಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಆಡಿಯೋದಲ್ಲಿ ಪರಸಪ್ಪ ಬೇಗೂರು ಎಂಬುವರು ಶಾಸಕರಿಗೆ ಕರೆ ಮಾಡಿ ಮಾತನಾಡಿದ್ದು, ನನ್ನ ಮಗನ ಪಿಎಸ್‍ಐ ನೇಮಕಾತಿಗೆ ಕೊಟ್ಟ 15 ಲಕ್ಷ ಹಣವನ್ನು ವಾಪಸ್ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಶಾಸಕರು ಅನುಮಾನ ಬೇಡ. ಹಣ ಖಂಡಿತಾ ಕೊಡುತ್ತೇನೆ ಎಂದು ತಿಳಿಸಿರೋದನ್ನು ಕೇಳಬಹುದು ಆದರೆ ಆ ನಂತರ ಶಾಸಕರು ಹಣ ನೀಡಿದ ವ್ಯಕ್ತಿಯೊಂದಿಗೆ ಒರಟಾಗಿ ಮಾತನಾಡಿದ್ದು, ಹಣ ಕೊಡು ಎಂದು ನಾನೇನು ನಿಮ್ಮ ಮನೆಗೆ ಬಂದಿದ್ದೆನಾ? ನಿನ್ನ ಉದ್ದೇಶವೇನು? ನೀನು ಯಾವ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ? ಅದನ್ನು ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ? ಹುಚ್ಚನ ರೀತಿಯಲ್ಲಿ ಮಾತನಾಡುತ್ತಿದ್ದೀಯಾ? .ಹಿಂಗೆ ಕೇಳಿದರೆ ಬಹಳ ನಿಷ್ಠುರವಾಗಿ ಮಾತನಾಡ ಬೇಕಾಗುತ್ತದೆ ಎಂದು ಬೈದಿದ್ದಾರೆ ಹಾಗೂ ಗೌರವದಿಂದ ಕೊಟ್ಟಿದ್ದೀಯಾ. ನಾಲ್ಕು ದಿನ ಹೆಚ್ಚು ಕಡಿಮೆ ಆಗುತ್ತದೆ. ಹಣ ನಾನೇ ಹೇಳಿ ಕೊಡಿಸುತ್ತೇನೆ. ಅದಕ್ಕೆ ನಾನು ಜವಾಬ್ದಾರಿಯಾಗಿದ್ದೇನೆ. ನಿನ್ನ ಅವಸರಕ್ಕೆ, ನಿನ್ನ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ. ಹಣ ಬೇರೆಯವರ ಕಡೆ ಇದೆ. ಅನುಕೂಲ ಮಾಡಿ ವಾಪಸ್ ಕೊಡಿಸುತ್ತೇವೆ ಎನ್ನುವುದನ್ನು ಕೇಳಬಹುದಾಗಿದೆ.

ಇದೀಗ ಈ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 

Leave a Reply

Your email address will not be published. Required fields are marked *

error: Content is protected !!