ಸಾಲಗಾರರು ವಂಚನೆಗೆ ಒಳಗಾಗುವುದನ್ನು ತಡೆಯಲು ಆರ್ಬಿಐ  ಹೊಸ ಮಾರ್ಗ ಸೂತ್ರ ಪ್ರಕಟ

ಹೊಸದಿಲ್ಲಿ, ಸೆ.5: ಡಿಜಿಟಲ್ ಸಾಲ ನೀಡುವ ಆ್ಯಪ್‌ ಗಳನ್ನು ಬಳಸುವ ಸಾಲಗಾರರು ವಂಚನೆಗೆ ಒಳಗಾಗುವುದನ್ನು ತಡೆಯಲು ಬ್ಯಾಂಕ್‌ಗಳು ಎಲ್ಲಾ ಸಾಲಿಗ ಸಂಸ್ಥೆಗಳಿಗೆ ಭಾರತದ ರಿಸರ್ವ್ ಬ್ಯಾಂಕ್ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. 

ಭಾರತದ ರಿಸರ್ವ್ ಬ್ಯಾಂಕ್ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಶಾಸನಬದ್ಧ ಸಂಸ್ಥೆಗಳು ಕೆಲವು ಮೂಲಭೂತ ಕನಿಷ್ಠ ಮಾಹಿತಿಯನ್ನು ಹೊರತುಪಡಿಸಿ ಸಾಲಗಾರರ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ.

ಮಾರ್ಗಸೂಚಿಯ ಪ್ರಕಾರ ಸಾಲಿಗರು ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ವಿವರಗಳಂತಹ ಮಾಹಿತಿಗಳನ್ನು ಮಾತ್ರ ಸಂಗ್ರಹಿಸಬಹುದು. ಇದು ಸಾಲ ಪ್ರಕ್ರಿಯೆ ಹಾಗೂ ವಿತರಣೆಗೆ, ಪಾವತಿಗೆ ಅಗತ್ಯ. ಸಾಲಗಾರನ ಬಯೋಮೆಟ್ರಿಕ್ ಮಾಹಿತಿಯನ್ನು ಡಿಜಿಟಲ್ ಸಾಲಗಾರ ಆ್ಯಪ್‌ಗಳು ಸಂಗ್ರಹಿಸುವಂತಿಲ್ಲ. ಹೊಸ ಸಾಲ ಪಡೆಯುತ್ತಿರುವ ಈಗಿನ ಗ್ರಾಹಕರು ಹಾಗೂ ಹೊಸ ಗ್ರಾಹಕರಿಗೆ ಸೆ.2 ರಿಂದ ಈ ಸುತ್ತೋಲೆ ಮಾರ್ಗಸೂಚಿಗಳು ಅನ್ವಯವಾಗಲಿದೆ. ಆದರೂ ಸುಗಮ ವ್ಯವಹಾರಕ್ಕಾಗಿ ಶಾಸನಬದ್ಧ ಸಂಸ್ಥೆಗಳಿಗೆ 2022 ರ ನವೆಂಬರ್ 30 ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಆರ್‌ಬಿಐ ಜಾರಿಗೊಳಿಸಿದ ಮಾರ್ಗಸೂಚಿಗಳು ಆಲ್ ಕಮರ್ಶಿಯಲ್ ಬ್ಯಾಂಕ್‌ಗಳು, ಪ್ರೈಮರಿ (ಗ್ರಾಮೀಣ)ಕೋ-ಆಪರೇಟಿವ್ ಬ್ಯಾಂಕ್‌ಗಳು, ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್‌ಗಳು, ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್‌ಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳು (ಹೌಸಿಂಗ್ ಫಿನಾನ್ಸ್ ಕಂಪೆನಿಗಳು)ನ್ನು ಒಳಗೊಳ್ಳಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!