ಉಡುಪಿ: ಸಾಂಪ್ರಾದಾಯಿಕ ಮರಳು ತೆರವು- ದಾಖಲೆ ಸಲ್ಲಿಸಿ

ಉಡುಪಿ, ಸೆ.4: ಟೆಂಡರ್ ಕಂ-ಹರಾಜು ಮೂಲಕ ಜಿಲ್ಲೆಯಲ್ಲಿ ಮಾನವ ಶ್ರಮದಿಂದ ಮರಳು ಬ್ಲಾಕ್‍ಗಳನ್ನು ವಿಲೇವಾರಿ ಮಾಡುವ ಸಂಬಂಧ ಜರುಗಿದ , ಜಿಲ್ಲಾ ಮರಳು ಉಸ್ತುವಾರಿ ಉಪಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾದಂತೆ, ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾದ ಸಂಭವನೀಯ ಪಟ್ಟಿಯಲ್ಲಿರುವ ತಾತ್ಕಾಲಿಕ ಪರವಾನಿಗೆದಾರರು/ಪರವಾನಿಗೆದಾರರು ಉಡುಪಿ ಜಿಲ್ಲೆಯಲ್ಲಿ ಒಂದು ವರ್ಷದಿಂದ ವಾಸ್ತವ್ಯ ಹೊಂದಿರುವ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರಿಂದ ವಾಸ ದೃಢೀಕರಣ ಪತ್ರವನ್ನು ಪಡೆದು ಹಾಗೂ ಸಾಂಪ್ರಾದಾಯಿಕವಾಗಿ ಮರಳು ತೆರವುಗೊಳಿಸಿರುವ ಬಗ್ಗೆ ಹೊಂದಿರುವ ದಾಖಲಾತಿ/ಪರವಾನಿಗೆ ಪ್ರತಿ ಹಾಗೂ ಇತರೆ ಪೂರಕ ದಾಖಲೆಗಳನ್ನು ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಗೆ ಸೆ.12 ರೊಳಗಾಗಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂ ವಿಜ್ಞಾನಿ ಯವರ ಕಚೇರಿ , ಗಣಿ & ಭೂವಿಜ್ಞಾನ ಇಲಾಖೆ, ರಜತಾದ್ರಿ, ಎ-ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ದೂರವಾಣಿ ಸಂ.0820-2572333 ಸಂಪರ್ಕಿಸುವಂತೆ ಹಿರಿಯ ಭೂ ವಿಜ್ಞಾನಿ, ಗಣಿ & ಭೂ ವಿಜ್ಞಾನ ಇಲಾಖೆ ಅವರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!