ಮಂಗಳೂರು ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜ್- ಸ್ನಾತಕೋತ್ತರ ಪದವಿ ಪ್ರವೇಶ ಆರಂಭ
ಮಂಗಳೂರು: ನ್ಯಾಕ್ (NAAC) ವತಿಯಿಂದ ಎ+ ಗ್ರೇಡ್ ಮಾನ್ಯತೆ ಪಡೆದಿರುವ ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರವೇಶ ಈಗಾಗಲೇ ಆರಂಭಗೊಂಡಿದೆ.
2022-24 ನೇ ಸಾಲಿನ ವರ್ಷಕ್ಕೆ ಹೊಸದಾಗಿ ಆರಂಭಗೊಂಡ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ) ಹಾಗೂ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ವಿಷಯಗಳಿಗೂ ಪ್ರವೇಶಾತಿ ನಡೆಯುತ್ತಿದೆ.
ಇದರ ಜೊತೆಗೆ 2022-23 ನೇ ಸಾಲಿನ ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರವೇಶ ಆರಂಭಗೊಂಡಿದ್ದು ಈ ವಿಭಾಗದಲ್ಲಿ ಎಂ.ಎ ಇಂಗ್ಲಿಷ್, ಎಂಎಸ್.ಸಿ ಕೆಮಿಸ್ಟ್ರಿ, ಎಂಎಸ್.ಸಿ ಸೈಕಾಲಜಿ, ಎಂಎಸ್.ಸಿ ಕ್ಲಿನಿಕಲ್ ಸೈಕಾಲಜಿ, ಎಂಎಸ್.ಸಿ ಬಿಗ್ ಡಾಟಾ ಎನಾಲಿಸ್ಟಿಕ್ಸ್, ಎಂ.ಕಾಂ, ಡಿಪ್ಲೊಮಾ ಇನ್ ಕೌನ್ಸಿಲಿಂಗ್ ಆ್ಯಂಡ್ ಗೈಡೆನ್ಸ್, ಡಿಪ್ಲೊಮಾ ಇನ್ ಬಿಗ್ ಡಾಟಾ ಅನಾಲಿಸ್ಟಿಕ್ಸ್ ವಿಷಯಗಳ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು www.stanescollege.edu.in ಮೂಲಕ ಆನ್ಲೈನ್ ನಲ್ಲಿ ದಾಖಲಾತಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ :[email protected] , [email protected] , @stanescollege.edu.in ಅಥವಾ 9035501438, 0820-2213794, 8762686927 ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.