ಬೆಂಗಳೂರು: ನಾನಾ ಕಡೆಗಳಲ್ಲಿ ಇಡಿ- ರೂ.17 ಕೋಟಿ ಜಪ್ತಿ
ಬೆಂಗಳೂರು ಸೆ.3: ಬೆಂಗಳೂರಿನ ನಾನಾ ಕಡೆಗಳಲ್ಲಿ ದಾಳಿ ಮಾಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 17 ಕೋಟಿ ರೂ ಹಣ ಜಪ್ತಿ ಮಾಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ.
ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ. ದಾಳಿ ನಡೆದಿದೆ. ನಿನ್ನೆ ಬೆಂಗಳೂರಿನ ಚೀನಾ ಲೋನ್ ಆಪ್ ಸಂಸ್ಥೆಗಳ 6 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿದ್ದು, ಆಪ್ ಗಳ ಮೂಲಕ ನಕಲಿ ದಾಖಲೆ ಸೃಷ್ಟಿಸಿ, ಭಾರೀ ಮೊತ್ತದ ವಂಚನೆಗಳನ್ನು ಎಸಗಿರುವುದು ಪತ್ತೆಯಾಗಿದೆ. ಹಾಗೂ ಅಧಿಕಾರಿಗಳು 17 ಕೋಟಿ ರೂ ಹಣ ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಡಿಮೆ ಸಾಲ ನೀಡಿ ಜನರಿಂದ ಸುಲಿಗೆ, ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದ್ದು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 18 ಎಫ್.ಐ.ಆರ್ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.