| ನವದೆಹಲಿ ಸೆ.3: ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸಿನಿ ಪ್ರಿಯರಿಗೆ ದಿ ಮಲ್ಟಿಫ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ(ಎಂಎಐ) ಸಿಹಿ ಸುದ್ದಿಯನ್ನು ನೀಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಎಂಎಐ ಸೆ.16 ರಂದು ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ದೇಶದ ಬಹುತೇಕ ಸಿನಿಮಾ ಮಂದಿರಗಳಲ್ಲಿ ಅಂದು ಟಿಕೆಟ್ ದರ ಕೇವಲ 75 ರೂ. ಇರಲಿದೆ ಎಂದು ತಿಳಿಸಿದೆ. ಸಿನಿ ಉದ್ಯಮ ಚೆನ್ನಾಗಿ ನಡೆಯಲು ಸಿನಿಮಾ ವೀಕ್ಷಕರೇ ಮುಖ್ಯ ಕಾರಣ. ಹಾಗಾಗಿ ಅವರಿಗೆ ಧನ್ಯವಾದ ತಿಳಿಸಲು ರಾಷ್ಟ್ರೀಯ ಸಿನಿಮಾ ದಿನವಾದ ಸೆ.16ರಂದು ಸಿನಿಮಾ ಟಿಕೆಟ್ ದರದಲ್ಲಿ ವಿಶೇಷ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಈ ದಿನದಂದು ಎಲ್ಲಾ ಭಾಷೆಯ ಸಿನಿಮಾಗಳ ಟಿಕೆಟ್ ದರ ಏಕರೂಪವಾಗಿ 75 ರೂ. ಇರಲಿದೆ ಎಂದು ತಿಳಿಸಿದೆ.ಈ ವಿಶೇಷ ದರವು ಪ್ರಮುಖ ಸಿನಿಮಾ ಮಂದಿರಗಳು, ಪಿವಿಆರ್, ಇನ್ನಾಕ್ಸ್, ಸಿನಿಪೊಲಿಸ್ ಸೇರಿದಂತೆ ಬಹುತೇಕ ಥಿಯೇಟರ್‌ಗಳಿಗೆ ಅನ್ವಯವಾಗಲಿದೆ. ಆದರೆ, ಬುಕ್ ಮೈ ಶೋ ಸೇರಿದಂತೆ ಇತರೆ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕ ಟಿಕೆಟ್ ಕಾಯ್ದಿರಿಸಿದರೆ ಹೆಚ್ಚುವರಿಯಾಗಿ ಜಿಎಸ್‌ಟಿ ಹಾಗೂ ಇಂಟರ್ನೆಟ್ ಶುಲ್ಕ ತೆರಬೇಕಾಗಿ ಬರಬಹುದು. ಥಿಯೇಟರ್‌ಗೆ ಹೋಗಿ ಟಿಕೆಟ್ ಖರೀದಿಸುವುದಿದ್ದರೆ 75 ರೂ. ಮಾತ್ರ ಪಾವತಿಸಿದರೆ ಸಾಕು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
| |