ಬೈಂದೂರು: ಒತ್ತಿನೆಣೆ ಕಡವೆ ಮಾಂಸ ಸಾಗಾಟ- ಇಬ್ಬರ ಬಂಧನ
ಬೈಂದೂರು ಸೆ.3(ಉಡುಪಿ ಟೈಮ್ಸ್ ವರದಿ): ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯ ಅನತಿ ದೂರದಲ್ಲಿ ಕಡವೆ ಭೇಟೆಯಾಡಿ ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ನಝೀರ್ (20), ಅಬ್ದುಲ್ ಆಲಿ (23) ಬಂಧಿತ ಆರೋಪಿಗಳು.
ಒತ್ತಿನೆಣೆ ಪರಿಸರದಲ್ಲಿ ಕಡವೆ ಬೇಟೆ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರು ಠಾಣಾಧಿಕಾರಿ ಸೆ.1 ರ ಬೆಳಿಗ್ಗೆ 6.30 ರ ಸುಮಾರಿಗೆ ಸ್ಥಳಕ್ಕೆ ದಾಳಿ ಮಾಡಿದ್ದರು. ಆದರೆ ಸ್ಥಳದಲ್ಲಿ ಯಾರು ಇಲ್ಲದೇ ಇದ್ದೂರದಿಂದ ಸಿಕ್ಕಂತಹ ಕುರೂಹಗಳ ಆಧಾರದ ಮೇಲೆ ನಾಕಾಬಂದಿ ಮಾಡಿ, ಸಂಶಯಾಸ್ಪದವಾಗಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 20 ಕೆ.ಜಿ ಕಡವೆ ಮಾಂಸ ಸಾಗಾಟ ಮಾಡುತ್ತಿದ್ದೂದು ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಒಂದು ದಿನ ವಲಯ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ಬೈಂದೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.