ಕನ್ನರ್ಪಾಡಿ ಶ್ರೀಜಯದುರ್ಗಪರಮೇಶ್ವರಿ ದೇವಸ್ಥಾನ : ನೂತನ ವ್ಯವಸ್ಥಾಪನ ಸಮಿತಿ ರಚನೆ- ಸರಕಾರ ಆದೇಶ
ಉಡುಪಿ ಸೆ.3 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಕನ್ನರ್ಪಾಡಿ ಶ್ರೀಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ಸರಕಾರ ರಚನೆ ಮಾಡಿ ಆದೇಶ ನೀಡಿದೆ.
ಈ ನೂತನ ವ್ಯವಸ್ಥಾಪನಾ ಸಮೀತಿಯ ಸದಸ್ಯರಾಗಿ ಕನ್ನರ್ಪಾಡಿ ಸಂಜಯ್, ಕಿನ್ನಿಮುಲ್ಕಿ ಸುರೇಖಾ ಕೆ. ಶೆಟ್ಟಿ, ವಿಮಲಾ ಎಸ್. ಶೇಟ್, ಕನ್ನರ್ಪಾಡಿ ರಾಘವೇಂದ್ರ ಭಟ್, ಕಡೆಕಾರು ವಿಜಯ ಭಟ್, ಬಲೈಪಾದೆ ಭಗವಾನ್ ದಾಸ್ ಕೆ., ನಿತ್ಯಾನಂದ ಆರ್. ಕನ್ನರ್ಪಾಡಿ, ಕಡೆಕಾರು ಕಿಶೋರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ನೂತನ ವ್ಯವಸ್ಥಾಪನ ಸಮಿತಿಗೆ ಶಾಸಕ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದು, ನೂತನ ವ್ಯವಸ್ಥಾಪನ ಸಮಿತಿಯ ಆಡಳಿತದಲ್ಲಿ ದೇವಸ್ಥಾನವು ಅಭಿವೃದ್ಧಿ ಹೊಂದಿಲಿ ಎಂದು ಹಾರೈಸಿದ್ದಾರೆ.