ಗುಜರಾತ್‌ ಗಲಭೆ- ತೀಸ್ತಾ ಸೆಟಲ್‌ವಾಡ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
2002ರ ಗುಜರಾತ್ ಕೋಮುಗಲಭೆ ಪ್ರಕರಣದಲ್ಲಿ ‘ಮುಗ್ಧರನ್ನು ಬಂಧಿಸಲು’ ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿರುವ ಆರೋಪದಲ್ಲಿ ಸೆಟಲ್‌ವಾಡ್ ಅವರನ್ನು ಬಂಧಿಸಲಾಗಿತ್ತು.

ಜೂನ್‌ನಲ್ಲಿ ಬಂಧನಕ್ಕೊಳಗಾಗಿದ್ದ ತೀಸ್ತಾ ಸೆಟಲ್‌ವಾಡ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಗಸ್ಟ್ 22ರಂದು ಗುಜರಾತ್ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಗುಜರಾತ್ ಸರ್ಕಾರ, ‘ಹಿರಿಯ ರಾಜಕೀಯ ನಾಯಕರ ಆಜ್ಞೆಯ ಮೇರೆಗೆ ತೀಸ್ತಾ ಅವರು ಇತರರೊಂದಿಗೆ ಸೇರಿ ‘ಸಂಚು’ ರೂಪಿಸಿದ್ದರು. ಅಷ್ಟೇ ಅಲ್ಲದೆ ಆ ರಾಜಕೀಯ ನಾಯಕರೊಂದಿಗೆ ಸಭೆಯನ್ನೂ ನಡೆಸಿ, ಇದಕ್ಕೆ ಸಂಬಂಧಿಸಿದಂತೆ ಬೃಹತ್ ಮೊತ್ತದ ಹಣವನ್ನೂ ಪಡೆದಿದ್ದರು’ ಎಂದು ಆರೋಪಿಸಿತ್ತು.

Leave a Reply

Your email address will not be published. Required fields are marked *

error: Content is protected !!