ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 80ನೇ ಬಡಗಬೆಟ್ಟು ಹಾಗೂ ಹಿರೇಬೆಟ್ಟು ಗ್ರಾಮ ಪಂಚಾಯತ್, ಜಿಲ್ಲಾ ಅಂಧತ್ವ ನಿವಾರಣ ಘಟಕ, ಜಿಲ್ಲಾ ಪಂಚಾಯತ್, ಹೆರ್ಗಾ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಲಯನ್ಸ್ ಕ್ಲಬ್ ಉಡುಪಿ ಚೇತನಾ ಇದರ ಸಂಯುಕ್ತ ಆಶ್ರಯದಲ್ಲಿ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಉಚಿತ ನೇತ್ರ ತಪಾಸಣಾ ಆಯೋಜಿಸಲಾಯಿತು.
ಮಣಿಪಾಲ ಕೆಎಂಸಿ ಆಸ್ಪತ್ರೆಯ ನೇತ್ರ ವೈದ್ಯೆ ಡಾ. ಪ್ರಿಯಾಂಕಾ ಅಗರ್ವಾಲ್, ಹಿರೇಬೆಟ್ಟು ಗ್ರಾಪಂ ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಚೇತನಾ ಅಧ್ಯಕ್ಷ ರಾಜೇಶ್ ಶೇರಿಗಾರ್, ಕಾರ್ಯದರ್ಶಿ ಸಂದೀಪ್, ಲಯನ್ಸ್ ಕ್ಲಬ್ ಹಿರಿಯಡಕ ಇದರ ಅಧ್ಯಕ್ಷ ರವೀಂದ್ರ ಹೆಗ್ಡೆ, ಉಪಾಧ್ಯಕ್ಷ ಹರೀಶ್ ಹೆಗ್ಡೆ, ರಿಜನ್ ಚೇರ್ ಮಾನ್ ಗಂಗಾಧರ ಶೆಟ್ಟಿಗಾರ್, ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನರಸಿಂಹ ನಾಯಕ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 88 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಆರೋಗ್ಯ ಸುರಕ್ಷ ಅಧಿಕಾರಿ ಸುಮಂಗಳ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸಹಕರಿಸಿದರು.