ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣಗೆ ಪಿತೃ ವಿಯೋಗ
ಉಡುಪಿ ಸೆ.2 (ಉಡುಪಿ ಟೈಮ್ಸ್ ವರದಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ರವರ ತಂದೆ ಆನಂದ ಎನ್. ಪುತ್ರನ್ ಅವರು ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ 10.30 ಕ್ಕೆ ಅಜ್ಜರಕಾಡಿನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಮೃತರು ಪುತ್ರರಾದ ಯಶ್ ಪಾಲ್ ಎ. ಸುವರ್ಣ, ಯಶವಂತ್ ಎ. ಸುವರ್ಣ, ಪುತ್ರಿಯರಾದ ಯಶ್ವಿನಿ ಪ್ರಮೋದ್ ಕುಮಾರ್, ಯಶ್ವಿಲ್ ಪ್ರಸೂನ್ ಕುಮಾರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಉಡುಪಿ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಇಂದು ಸಂಜೆ 5 ಗಂಟೆಗೆ ನೆರವೇರಲಿದೆ ಎಂದು ತಿಳಿದು ಬಂದಿದೆ.