ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್- ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನವನ್ನು  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಲ್ಲಿ ಚಾಲನೆ ನೀಡಲಾಯಿತು.

ಇಂದು ಪ್ರಾರಂಭವಾದ ಈ ಅಭಿಯಾನ ಇಂದಿನಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದು ಸುಮಾರು 1 ಲಕ್ಷಕ್ಕೂ ಮೀರಿದ ಪೋಸ್ಟ್ ಕಾರ್ಡ್ನ್ನು ತುಳು ಭಾಷೆಯ ಮಾನ್ಯತೆಗಾಗಿ ಪ್ರಧಾನಿ ಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಮೂಲ ಜನಾಂಗದ ಪ್ರದೇಶವಾದ ಬಂಜಾರು ಮಲೆಯಿಂದ ಸಾಂಕೇತಿಕವಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬಂಜಾರು ಮಲೆಯ ಮೂಲಜನಾಂಗದವರು ತುಳು ಭಾಷೆಯ ಮಾನ್ಯತೆಗಾಗಿ ನಡೆಯುವ  ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.

ನಮ್ಮ ಮಾತೃ ಭಾಷೆಯಾದ ತುಳುವಿಗೆ ಸರಕಾರದಿಂದ ಮಾನ್ಯತೆ ದೊರಕಬೇಕು ಎಂದು  ತಿಳಿಸಿ ಎಲ್ಲಾ ಮನೆಗಳಿಂದ ಪೋಸ್ಟ್ ಕಾರ್ಡ್ ಬರೆಯುವ ಮುಖಾಂತರ ಈ ಅಭಿಯಾನಕ್ಕೆ ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ತುಳುವೆರೆ ಪಕ್ಷದಿಂದ ಸಂಪೂರ್ಣ ಬೆಂಬಲ ದೊರೆತಿದ್ದು, ಕಾರ್ಯಕ್ರಮದಲ್ಲಿ ತುಳುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು.ಪೂಜಾರಿ, ಉಪಾಧ್ಯಕ್ಷ ಸಂತೋಷ್ ಮತ್ತು ಸದಸ್ಯರಾದ  ಪ್ರಜ್ವಲ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾದ ಪೂಜಾ ಶೆಟ್ಟಿ, ಸದಸ್ಯರಾದ ನಿಕ್ಷಿತಾ, ತುಳುನಾಡು ವಾರ್ತೆ ವಾರ ಪತ್ರಿಕೆಯ ಸಂಪಾದಕರಾದ ಪುನೀತ್ ಮತ್ತು ತುಳುವೆರ್ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ. ಉದ್ಘಾಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ದೊರೆಯಿತು. ಸಮಾಜ ಸೇವಕ ಪ್ರವೀಣ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತುಳುವೆರೆ ಪಕ್ಷದಿಂದ ಅಭಿಯಾನಕ್ಕೆ ಚಾಲನೆ: ತುಳುವೆರೆ ಪಕ್ಷವು  ಕಳೆದ10 ವರ್ಷಗಳಿಂದ ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಅನೇಕ ವಿವಿಧ  ಹೋರಾಟಗಳನ್ನು ಮಾಡುತ್ತಿದ್ದು, ತುಳುವೆರೆ ಪಕ್ಷಕ್ಕೆ ಈ ಅಭಿಯಾನದಿಂದ ಬಹಳ ಸಂತೋಷವಾಗಿದ್ದು ತುಳುವೆರೆ ಪಕ್ಷದಿಂದ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲವಿದೆ. ಹಾಗೂ ತುಳುವೆರೆ ಪಕ್ಷದ ಕಡೆಯಿಂದ 10ಸಾವಿರ ಕಾರ್ಡುಗಳನ್ನು ಬೆಳ್ತಂಗಡಿ ವಲಯದಲ್ಲಿ ಬರೆಯಿಸಿ ಪ್ರಧಾನಿ ಮೋದಿಯವರಿಗೆ ಕಳುಹಿಸುವ ಮೂಲಕ ನಮ್ಮ ಪಕ್ಷದಿಂದ ಬೆಂಬಲವನ್ನು ನೀಡಲಾಗುವುದೆಂದು ತುಳುವೆರ್ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ. ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!