ಚೈನಾ ಮೊಬೈಲ್ ಕಂಪೆನಿ ಮಾಡುತ್ತಿರುವ ತಾರತಮ್ಯ ನಿಲ್ಲಿಸಿ: ಟ್ವಿಟ್ ಅಭಿಯಾನ
ಉಡುಪಿ (ಉಡುಪಿ ಟೈಮ್ಸ್ ವರದಿ) : ಚೈನಾ ಮೊಬೈಲ್ ಕಂಪೆನಿ ಮತ್ತು ಆನ್ಲೈನ್ ಕಂಪನಿಗಳು ಒಟ್ಟು ಸೇರಿ ಮಾಡುತ್ತಿರುವ ಅನ್ಯಾಯ, ಭೇದಭಾವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೈಲರ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಸಲೀಂ ತಿಳಿಸಿದರು.
ಚೈನೀಸ್ ಮೊಬೈಲ್ ಕಂಪನಿಗಳ ಅನ್ಯಾಯ ವಿರೋಧಿಸಿ ದ.ಕ ಉಡುಪಿ ಘಟಕದ ಸಭೆ ಯಲ್ಲಿ ಮಾತನಾಡುತ್ತ ಅವರು ಚೈನೀಸ್ ಮೊಬೈಲ್ ಕಂಪನಿಗಳು ಆನ್ಲೈನ್ ಮತ್ತು ರಿಟೈಲರ್ಸ್ ಗಳ ಮಧ್ಯೆ ಮಾಡುತ್ತಿರುವ ತಾರತಮ್ಯ ನಿಲ್ಲಿಸಲು, ಒಂದೇ ಸಮನಾದ ದರವನ್ನು ನಿಗದಿಪಡಿಸಲು, ಒಂದೇ ಸಮನಾಗಿ ಹಂಚಿಕೆ ಮಾಡಲು, ಒಂದೇ ಸಮಯಕ್ಕೆ ಬಿಡುಗಡೆಯಾಗಬೇಕು ಎಂದು ಆಗ್ರಹಿಸಿದರು.
ಆನ್ಲೈನ್ ಮತ್ತು ಚೈನೀಸ್ ಮೊಬೈಲ್ ಕಂಪನಿಗಳಿಂದ ನಮಗೆ ನ್ಯಾಯ ಸಿಗಬೇಕಾದರೆ ಪ್ರತಿಯೊಬ್ಬ ವ್ಯಾಪಾರಸ್ಥರು ಆಲ್ ಇಂಡಿಯಾ ಮೊಬೈಲ್ ರಿಟೇಲ್ಸ್ ಅಸೋಸಿಯೇಷನ್ ಜೊತೆ ಕೈಜೋಡಿಸಿ ಬೇಕು. ಆನ್ಲೈನ್ ಮತ್ತು ಚೈನೀಸ್ ಮೊಬೈಲ್ ಮಾರಾಟದಿಂದ ಮೊಬೈಲ್ ಮಾರಾಟದ ಅಂಗಡಿಗಳು ಸಂಕಷ್ಟಕ್ಕೆ ಸಿಲುಕಿದ್ದು ಇದೆ ರೀತಿ ವ್ಯಾಪಾರ ಮುಂದುವರಿದರೆ ಸ್ಥಳೀಯ ವ್ಯಾಪಾರಿಗಳ ವ್ಯವಹಾರ ಅವನತಿಯತ್ತ ಸಾಗುತ್ತಿದ್ದು. ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚಿದೆ ಎಂದರು.
ಉಡುಪಿ ಮೊಬೈಲ್ ರಿಟೈಲರ್ ಅಸೋಸಿಯೇಷನ್ ನೊಂದಿಗೆ ಎಲ್ಲಾ ಸ್ಥಳೀಯ ವ್ಯಾಪಾರಿಗಳು ಬೆಂಬಲ ನೀಡಬೇಕು ಹಾಗು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ ನಿರಂತರ ಟ್ವಿಟ್ ಮಾಡಿ ಜನಾಭಿಪ್ರಾಯ ಮೂಡಿಸಿ. ನಮ್ಮ ನ್ಯಾಯವಾದ ಬೇಡಿಕೆಯನ್ನು ಸರಕಾರಕ್ಕೆ ಮುಟ್ಟುವಂತೆ ಮಾಡಬೇಕಾಗಿದೆ ಎಂದು ಕೋರಿಕೊಂಡರು.
ಸಭೆಯಲ್ಲಿ ಕಾರ್ಯದರ್ಶಿ ಅಬ್ದುಲ್ ಮುನೀರ್, ಉಪಾಧ್ಯಕ್ಷರಾದ ಅಝರ್ ,ಉಡುಪಿ ಜಿಲ್ಲಾಧ್ಯಕ್ಷ ಸುಹಾಸ್ ಕಿಣಿ, ಕಾರ್ಯದರ್ಶಿ ವಿಕಿ ಮೊಬೈಲ್ ನ ಮಾಲಕ ವಿವೇಕ್ ಜಿ. ಸುವರ್ಣ ಉಪಸ್ಥಿತರಿದ್ದರು.