ಸೆ.2 ಮಂಗಳೂರಿಗೆ ಪ್ರಧಾನಿ ಭೇಟಿ- ಬಿಗಿ ಭದ್ರತೆ ಗೃಹ ಸಚಿವ ಅರಗ ಜ್ಞಾನೇಂದ್ರ

ಮಂಗಳೂರು ಸೆ.1(ಉಡುಪಿ ಟೈಮ್ಸ್ ವರದಿ): ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಮಂಗಳೂರು ಪೊಲೀಸರು ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಭಾಗವಹಿಸುವಿಕೆಯಲ್ಲಿ ಸೆ.2 ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ವೇದಿಕೆ ಸಿದ್ದತೆ ಹಾಗೂ ಅಂತಿಮ ಸಿದ್ದತೆಗಳ ಕುರಿತು ಮಾಹಿತಿ ನೀಡಿದ ಅವರು, ಭದ್ರತೆಯಲ್ಲಿ ಯಾವುದೇ ರೀತಿಯಲ್ಲೂ ಲೋಪ ಆಗದಂತೆ ವಿಶೇಷವಾದ ಮುತುವರ್ಜಿ ವಹಿಸಲಾಗಿದೆ. ಇಲ್ಲಿನ ಶಾಸಕರು, ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ವಿಶೇಷ ಆಧ್ಯತೆ ನೀಡಿ ಕಾರ್ಯಕ್ರಮದ ಉಸ್ತುವಾರಿ ನೊಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮ ಹಿನ್ನಲೆಯಲ್ಲಿ ಎಡಿಜಿಪಿ ಅವರು ಈಗಾಗಲೇ ಮಂಗಳೂರಿಗೆ ಬಂದಿದ್ದು, ಡಿಜಿಪಿ ಅವರು ಇಂದೇ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಮಾರು 100 ಜನ ಪೊಲೀಸ್ ಅಧಿಕಾರಿಗಳು, 2000 ಜನರು ಸಿವಿಲ್ ಪೊಲೀಸರು ಹಾಗೂ ಕೆಎಸ್‍ಆರ್‍ಪಿ, ಎಎನ್‍ಎಫ್‍ಒ, ಸಿಎಆರ್‍ಒ, ಡಿಎಆರ್‍ಒ, ಆರ್‍ಎಎಫ್‍ಒ, ಐಎಸ್‍ಡಿ, ಗರುಡಾ ಪಡೆ ಸೇರಿ ಒಟ್ಟು 3000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಮಾತನಾಡಿ, ನಾಳೆ ಮಂಗಳೂರಿನಲ್ಲಿ ಸುಮಾರು 3,700 ಕೋಟಿ ರೂಪಾಯಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಸಲುವಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ.

ಹಾಗೂ ಅವರು ಈ ವೇಳೆ ಸುಮಾರು 1 ಲಕ್ಷಕ್ಕೂ ಅಧಿಕ ಜನರ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಕಡೆಯಿಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಸಿದ್ದತೆಗಳನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಅಂತಿಮ ಹಂತದ ತಯಾರಿಯನ್ನು ಪೂರ್ಣ ಗೊಳಿಸಿದ್ದೇವೆ. ಎರಡು ಜಿಲ್ಲೆಗಳ ಕೇಂದ್ರ ಮತ್ತು ರಾಜ್ಯ ಸರಕಾರದ ಫಲಾನುಭವಿಗಳನ್ನು ಬಹಳ ದೊಡ್ಡ ಪ್ರಮಣದಲ್ಲಿ ಸೇರಿಸಬೇಕೆಂದು ಪೂರ್ವ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಜನರು ಸೇರುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮಕ್ಕಾಗಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಬಸ್ ಗಳನ್ನು ಬುಕ್ ಮಾಡಿದ್ದೇವೆ. ಕೃಷಿ ಸಮ್ಮಾನ್, ವಿದ್ಯಾ ನಿಧಿ, ಪಿಎಂ ಕಿಸಾನ್ ನಿಧಿ ಯೋಜನೆ ಸೇರಿದಂತೆ ಬೇರೆ ಬೇರೆ ಯೋಜನೆ ಯ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಸಂಪರ್ಕಿಸುವ ಒಂದು ಉತ್ತ ಮ ಪ್ರಯತ್ನ ಕಳೆದ ಒಂದು ವಾರದಿಂದ ನಡೆದಿದೆ. ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರು ನಾಳೆ ಬೆಳಿಗ್ಗೆ 11.30 ರಿಂದ 12 ಗಂಟೆ ಒಳಗೆ ಮೈದಾನವನ್ನು ತಲುಪಬೇಕು. ಎಲ್ಲರಿಗೂ ಉಪಹರದ ವ್ತವಸ್ಥೆಯನ್ನೂ ಮಾಡಲಾಗಿದ್ದು, ಈ ಸಮಾವೆಶದ ಮೂಲಕ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೊಸ ಮೈಲುಗಲ್ಲು ಸೃಷ್ಟಿಯಾಗಲಿದೆ. ಹಾಗೂ ರಾಜಕೀಯದ ದೃಷ್ಟಿಯಿಂದಲೂ ಇದು ಕಾರ್ಯಕರ್ತರಿಗೆ ಹೊಸ ಉತ್ಸಾಹ ನೀಡಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!