ಬಹ್ಮಾವರ: ಪತಿಯ ಕಿರುಕುಳದಿಂದ ಬೇಸತ್ತು ಪತ್ನಿ ಆತ್ಮಹತ್ಯೆ

ಬ್ರಹ್ಮಾವರ, ಸೆ.1(ಉಡುಪಿ ಟೈಮ್ಸ್ ವರದಿ): ಪತಿಯ ಕಿರುಕುಳದಿಂದ ಬೇಸತ್ತು ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರದ ಅಜ್ರಿ ಗ್ರಾಮದ ವಸಂತ ಕುಲಾಲ್ ಎಂಬವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಷಾ (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಉಷಾ ಅವರಿಗೆ 11 ವರ್ಷಗಳ ಹಿಂದೆ ಚಂದ್ರಹಾಂಡ ಎಂಬಾತ ನೊಂದಿಗೆ ಮದುವೆ ಆಗಿದ್ದು, ಮದುವೆ ನಂತರ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ನಂತರ 8 ತಿಂಗಳಿನಿಂದ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದಲ್ಲಿ ವಾಸಿಸುತ್ತಿದ್ದು, ಇಬ್ಬರೂ ಪೇತ್ರಿಯ ಗಾರ್ಮೆಂಟ್ಸ್ ಪ್ಯಾಕ್ಟರಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು.

ಆದರೆ ಬೆಂಗಳೂರಿನಲ್ಲಿ ಇರುವಾಗ ಆರೋಪಿಗೆ ವ್ಯವಹಾರದಲ್ಲಿ ಆದ ನಷ್ಟಕ್ಕೆ ಉಷಾ ರವರಿಗೆ ಬೈಯುವುದು ಹಾಗೂ ತವರು ಮನೆಯಲ್ಲಿ ತನಗೆ ಮರ್ಯಾದೆ ಸಿಕ್ಕುತ್ತಿಲ್ಲ ಎಂದು ಮನೆಯಲ್ಲಿ ಆಗಾಗ ಗಲಾಟೆ ಮಾಡುತ್ತಿದ್ದ ಬಗ್ಗೆ ಉಷಾ ರವರು ತಮ್ಮ ಅಣ್ಣನ ವಸಂತ ಕುಲಾಲ್ ಅವರ ಬಳಿ ಹೇಳಿಕೊಂಡಿದ್ದರು. ಆ.30 ಸಂಜೆ ವೇಳೆ ಉಷಾ ಹಾಗೂ ಆರೋಪಿಯ ನಡುವೆ ಗಲಾಟೆಯಾಗಿದ್ದು ಆನಂತರ ಉಷಾ  ಬೇಸರಗೊಂಡು ಕೋಣೆಯಲ್ಲಿ ತಮ್ಮನ್ನು ತಾವು ಲಾಕ್ ಮಾಡಿಕೊಂಡಿದ್ದರು. ನಂತರ ಆ.31 ರಂದು ಬೆಳಿಗ್ಗೆ ಉಷಾರವರನ್ನು ಕಿಟಕಿ ಮೂಲಕ ನೋಡಿದಾಗ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಅದರಂತೆ ಉಷಾರವರ ಸಾವಿಗೆ ಅವರ ಗಂಡನ ದುಷ್ಪ್ರೇರಣಯೇ ಕಾರಣ ಎಂಬುದಾಗಿ ವಸಂತ ಕುಲಾಲ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!