ಪ್ರಧಾನಿ ಮೋದಿ ಭೇಟಿ- ವಾಹನಗಳ ನಿಲುಗಡೆ, ಸಂಚಾರ ವ್ಯವಸ್ಥೆಯ ಬದಲಾವಣೆ ಮಾಹಿತಿ

ಮಂಗಳೂರು, ಸೆ.1: ನಾಳೆ ಬಂಗ್ರ ಕೂಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡುಗೊಳಿಸಲಾಗಿದೆ. 

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದು, ಸೆ.2 ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಜ್ಪೆ ಕೆಂಜಾರು, ಮರವೂರು, ಮರಕಡ, ಕಾವೂರು, ಬೋಂದೆಲ್, ಪದವಿನಂಗಡಿ, ಯೆಯ್ಯಾಡಿ, ರಾ.ಹೆ.66 ರ ಕೆಪಿಟಿ ಜಂಕ್ಷನ್‌ನಿಂದ ಕೊಟ್ಟಾರ ಚೌಕಿ, ಕೂಳೂರು, ಎನ್‌ಎಂಪಿಎವರೆಗೆ ಹಾದು ಹೋಗುವ ಎರಡೂ ಬದಿಗಳಲ್ಲಿ  ಹಾಗೂ, ಗೋಲ್ಡ್ ಫಿಂಚ್ ಮೈದಾನ ಮತ್ತು ಸುತ್ತಲಿನ 500 ಮೀ. ವ್ಯಾಪ್ತಿಯ ರಸ್ತೆಗಳಲ್ಲೂ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಇದರ ಜೊತೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು, ಮರವೂರು, ಮರಕಡ, ಕಾವೂರು, ಬೋಂದೆಲ್, ಪದವಿನಂಗಡಿ, ಯೆಯ್ಯಾಡಿ ಹಾಗೂ ರಾ.ಹೆ.66 ರ ಕೆಪಿಟಿ ಜಂಕ್ಷನ್‌ ನಿಂದ ಕೊಟ್ಟಾರ ಚೌಕಿ, ಕೂಳೂರು-ಎನ್‌ಎಂಪಿಎ ವರೆಗೆ ಎಲ್ಲಾ ಸರಕು ವಾಹನ, ಘನ ವಾಹನ, ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು  ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ

ಇನ್ನು ಬಂಗ್ರ ಕೂಳೂರು ಗೋಲ್ಡ್‌ ಫಿಂಚ್ ಸಿಟಿ ಮೈದಾನದವರೆಗೆ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಉಪಯೋಗಿಸುವ ವಾಹನಗಳನ್ನು, ನಿಗದಿತ ಪಾರ್ಕಿಂಗ್ ಸ್ಥಳಗಳಿಗೆ ಸಂಚರಿಸಲು ಮತ್ತು ತುರ್ತು ಸೇವೆಯ ವಾಹನಗಳು ಈ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗಿದೆ.

ಸೆ.2ರಂದು ಬೆಳಗ್ಗೆ 10ರಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂಜೂರು, ಪೊರ್ಕೊಡಿ, ಮುಲ್ಕಿ, ಹಳೆಯಂಗಡಿ, ಜೋಕಟ್ಟೆ ಕ್ರಾಸ್, ಲೇಡಿಹಿಲ್ ಹೀಗೆ 9 ಜಂಕ್ಷನ್‌ ಗಳಲ್ಲಿ  ಸಂಚಾರ ಬದಲಾವಣೆ ಮಾಡಿ ಅಲ್ಲದೆ ಪರ್ಯಾಯ ರಸ್ತೆಗಳನ್ನು ಗುರುತಿಸಲಾಗಿದೆ.

ಅದರಂತೆ ಬಂಗ್ರ ಕೂಳೂರಿನ ಡೆಲ್ಟಾ ಗ್ರೌಂಡ್‌ನಲ್ಲಿ ವಿವಿಐಪಿ ವಾಹನಗಳಿಗೆ, ಕೂಳೂರಿನ ಸೋಮಯಾಜಿ ಮೈದಾನದಲ್ಲಿ ವಿಐಪಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಎರಡೂ ವಾಹನಗಳು ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರಬೇಕು.

ಹಾಗೂ ಪಣಂಬೂರು-ತಣ್ಣೀರುಬಾವಿ ರಸ್ತೆಯಲ್ಲಿ ಕವೂರು, ಸುರತ್ಕಲ್, ಪಣಂಬೂರು, ಬಜ್ಪೆ ಮಾರ್ಗವಾಗಿ ಬರುವ ವಾಹನಗಳು ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು, ಫಲಾನುಭವಿಗಳ ವಾಹನಗಳು (1500 ಬಸ್‌ಗಳು, 500 ಕಾರುಗಳು) ನಿಲುಗಡೆ ಮಾಡಬೇಕು ಎಂದು ತಿಳಿಸಲಾಗಿದೆ.

ಎನ್‌ಎಂಪಿಟಿ ಮೈದಾನದಲ್ಲಿ ಕಾವೂರು, ಸುರತ್ಕಲ್, ಪಣಂಬೂರು, ಬಜ್ಪೆ ಮಾರ್ಗವಾಗಿ ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು (200 ಬಸ್‌ಗಳು, 600 ಬೈಕ್‌ಗಳು) ನಿಲುಗಡೆ ಮಾಡಬೇಕು. ಪಣಂಬೂರು ಎಂಎಸ್‌ಇಝೆಡ್ ರಸ್ತೆಯಲ್ಲಿ ಕಾವೂರು, ಸುರತ್ಕಲ್, ಪಣಂಬೂರು, ಬಜ್ಪೆ ಮಾರ್ಗವಾಗಿ ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು (1900 ಲಘು ವಾಹನಗಳು), ಬಂಗ್ರ ಕೂಳೂರು ಎಜೆ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ವಿಐಪಿ ವಾಹನಗಳು (100 ಕಾರುಗಳು) ನಿಲುಗಡೆ ಮಾಡಬೇಕು.

ಹಾಗೂ ಬಂಗ್ರ ಕೂಳೂರು ಸಮಾವೇಶ ಕಾರ್ಯಕ್ರಮದ ಪೂರ್ವಭಾಗದಲ್ಲಿ ಅಮೆಝಾನ್ ಗೋದಾಮು ಬಳಿ ಕಾರ್ಯಕ್ರಮಕ್ಕೆ ಬರುವ 2 ಸಾವಿರ ಕಾರುಗಳು ಮತ್ತು 3 ಸಾವಿರ ಬೈಕುಗಳು, ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನ ಜಂಕ್ಷನ್‌ನಿಂದ ಕಾವೂರು ಜಂಕ್ಷನ್‌ವರೆಗೆ ಬೆಳ್ತಂಗಡಿ ಮತ್ತು ಕಾಸರಗೋಡು ಕಡೆಯಿಂದ ಬರುವ 350 ಬಸ್‌ಗಳು, ಕೆಪಿಟಿ ಮೈದಾನದಲ್ಲಿ ಮುಲ್ಕಿ-ಮೂಡುಬಿದಿರೆ ಕಡೆಯಿಂದ ಬರುವ 200 ಬಸ್‌ಗಳು , 

ಆರ್‌ಟಿಒ ಟ್ರಯಲ್ ಮೈದಾನದಲ್ಲಿ ಪುತ್ತೂರು, ಸುಳ್ಯದಿಂದ ಬರುವ 50 ಬಸ್‌ಗಳು , ಪದುವಾ ಕಾಲೇಜು ಮೈದಾನದಲ್ಲಿ ಪುತ್ತೂರು, ಸುಳ್ಯದಿಂದ ಬರುವ 250 ಬಸ್‌ಗಳು , ಲಾಲ್‌ಬಾಗ್-ಕರಾವಳಿ ಉತ್ಸವ ಮೈದಾನದಲ್ಲಿ ಮಂಗಳೂರು ನಗರ ವ್ಯಾಪ್ತಿಯಿಂದ ಬರುವ 250 ಬಸ್‌ಗಳು , ಉರ್ವ ಮಾರ್ಕೆಟ್ ಮೈದಾನ ಮತ್ತು ಲೇಡಿಹಿಲ್ ಚರ್ಚ್ ಮೈದಾನದಲ್ಲಿ ಉಳ್ಳಾಲ ತಾಲೂಕಿನಿಂದ ಬರುವ ತಲಾ 100 ಬಸ್‌ಗಳು ಪಾರ್ಕಿಂಗ್ ಮಾಡಬೇಕು ಎಂದು ಸೂಚಿಸಲಾಗಿದೆ.

ಇನ್ನು ಉರ್ವಸ್ಟೋರ್ ಮೈದಾನ, ಇನ್ಫೋಸಿಸ್ ಹಿಂಭಾಗದ ರಸ್ತೆ ಮೂಲಕ ಕುಂಟಿಕಾನ ತನಕದ ರಸ್ತೆಯಲ್ಲಿ ಬಂಟ್ವಾಳ ತಾಲೂಕಿನಿಂದ ಬರುವ 300 ಬಸ್‌ಗಳಿಗೆ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!