ಬೈಂದೂರು ಮಾದಕ ವಸ್ತು ಸೇವನೆ ಪ್ರಕರಣ- ಇಬ್ಬರು ಯುವಕರು ವಶಕ್ಕೆ

ಬೈಂದೂರು ಆ.29(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಯುವಕರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಗರಾಜ ಮೊಗವೀರ (23), ಹೊಂಗೆ ಮಹಮ್ಮದ್ ಫರ್ಹಾನ್ (23) ಪೊಲೀಸರು ವಶಕ್ಕೆ ಪಡೆದ ಯುವಕರು. 
ಅಮಲಿನಲ್ಲಿ ತೂರಾಡಿಕೊಂಡಿದ್ದ ನಾಗರಾಜ ಮೊಗವೀರ ನನ್ನು ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ ಹಾಗೂ ಶಿರೂರಿನ  ಹಡವಿನಕೋಣೆ ಶಾಲೆಯ ಬಳಿ ಹೊಂಗೆ ಮಹಮ್ಮದ್ ಫರ್ಹಾನ್ ನನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇವರಿಬ್ಬರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!