| ಚಿತ್ರದುರ್ಗ, ಆ.29: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಲಾಗಿದೆ ಎಂಬ ವದಂತಿಗಳಿಗೆ ಸಂಬಂಧಿಸಿ ಸ್ವಾಮಿಜಿಗಳು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣ ದಾಖಲಾಗಿ ಎರಡು ದಿನಗಳ ಬಳಿಕ ಮಠಕ್ಕೆ ವಾಪಸ್ಸು ಬಂದ ಅವರು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿ,” ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದೆಲ್ಲದಕ್ಕೂ ಈಗ ತಾರ್ಕಿಕ ಅಂತ್ಯ ಬೇಕಾಗಿದೆ.ನಾವು ಈ ನೆಲದ ಕಾನೂನ್ನು ಗೌರವಿಸುವ ಮಠಾಧೀಶರಾಗಿದ್ದೇವೆ. ನಾವು ಇರುವವರೆಗೂ ಯಾವುದೇ ಪಲಾಯನವಿಲ್ಲ. ಎಲ್ಲರೂ ಸೇರಿ ಸಹನೆ ಮತ್ತು ಬುದ್ದಿವಂತಿಕೆಯಿಂದ ಸಮಸ್ಯೆ ಎದುರಿಸೋಣ. ಇದೇನು ಹೊಸದಲ್ಲ. ಕಳೆದ 15 ವರ್ಷಗಳಿಂದ ಇಂತಹ ಪಿತೂರಿಗಳು ನಡೆಯುತ್ತಿದೆ. ಯಾರು ಸಹ ಆತಂಕಕ್ಕೆ ಒಳಗಾಗುವುದು ಬೇಡ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಬರುವೆ ಎಲ್ಲರಿಗೂ ಶುಭವಾಗಲಿ” ಎಂದಿದ್ದಾರೆ.
| |